ಸರ್ಕಾರಿ ಕೆಲಸ ಉಳಿಸಿಕೊಳ್ಳಲು ಹೆಣ್ಣು ಮಗುವನ್ನು ಕಾಲುವೆಗೆ ಎಸೆದ ದಂಪತಿ!

Prasthutha|

ಜೈಪುರ: ಸರ್ಕಾರಿ ಕೆಲಸವನ್ನು ಉಳಿಸಿಕೊಳ್ಳಲು ತಮ್ಮ 5 ತಿಂಗಳ ಹೆಣ್ಣು ಮಗುವನ್ನು ದಂಪತಿ ಕಾಲುವೆಗೆ ಎಸೆದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.


ಕಾಲುವೆಗೆ ಎಸೆದ ಪಾಪಿ ತಂದೆಯನ್ನು ಜವಾಹರ್ ಲಾಲ್ ಎಂದು ಗುರುತಿಸಲಾಗಿದೆ. ಈತ ಚಂದಾಸರ್ ಗ್ರಾಮದಲ್ಲಿ ಶಾಲಾ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಕಳೆದ ವರ್ಷ ಡಿಸೆಂಬರ್’ನಲ್ಲಿ ನೀಡಿದ ದಾಖಲೆಯಲ್ಲಿ ಝನ್ವರ್ಲಾಲ್ ತಾನು ಇಬ್ಬರು ಮಕ್ಕಳನ್ನು ಹೊಂದಿರುವುದಾಗಿ ತಿಳಿಸಿದ್ದನು. ಆದರೆ ಇತ್ತೀಚೆಗೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ, ಆ ವ್ಯಕ್ತಿ ಕೆಲಸ ಕಳೆದುಕೊಳ್ಳುವ ಭೀತಿ ಆತನಿಗೆ ಎದುರಾಗಿತ್ತು.

- Advertisement -


ಬಿಕಾನೇರ್ ನ ಛತ್ತರ್ ಗಢದಲ್ಲಿ ಪುರುಷ ಮತ್ತು ಮಹಿಳೆಯೊಬ್ಬರು ಹೆಣ್ಣು ಮಗುವನ್ನು ಕಾಲುವೆಗೆ ಎಸೆದಿದ್ದಾರೆ ಎಂಬ ಮಾಹಿತಿಯನ್ನು ನಾವು ಪಡೆದುಕೊಂಡಿದ್ದೇವೆ. ನಂತರ ಮಗುವಿನ ದೇಹವನ್ನು ಪೊಲೀಸರು ವಶಪಡಿಸಿಕೊಂಡರು. ಇದೀಗ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಈ ಇಬ್ಬರೂ ಮೃತ ಹೆಣ್ಣು ಮಗುವಿನ ಪೋಷಕರೆಂದು ತಿಳಿದುಬಂದಿದೆ ಎಂದು ಸರ್ಕಲ್ ಆಫೀಸರ್ ವಿನೋದ್ ಕುಮಾರ್ ತಿಳಿಸಿದ್ದಾರೆ.

- Advertisement -