ಪ್ಯಾರಾಚೂಟ್ ನ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ: ವೀಡಿಯೋ ವೈರಲ್

Prasthutha|

ದಿಯು: ಪ್ಯಾರಾಸೈಲಿಂಗ್ ಮಾಡುತ್ತಿದ್ದ ವೇಳೆ ಪ್ಯಾರಾಚೂಟ್ ನ ಹಗ್ಗ ತುಂಡಾಗಿ ಎತ್ತರಕ್ಕೆ ಹಾರಿದ್ದ ದಂಪತಿ ಸಮುದ್ರಕ್ಕೆ ಬಿದ್ದಿರುವ ಘಟನೆ ದಿಯು ಕರಾವಳಿಯಲ್ಲಿ ನಡೆದಿದೆ.

- Advertisement -

ಪ್ಯಾರಾಚೂಟ್ ನಲ್ಲಿ ದಂಪತಿ ಎತ್ತರಕ್ಕೆ ಹೋದ ಬಳಿಕ ಪವರ್ ಬೋಟ್ ಗೆ ಕಟ್ಟಲ್ಪಟ್ಟಿದ್ದ ಹಗ್ಗ ತುಂಡಾಗಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಗುಜರಾತ್ ಮೂಲದ ಅಜಿತ್ ಕಥಾಡ್ ಮತ್ತು ಪತ್ನಿ ಸರಳಾ ಕಥಾಡ್ ಕಳೆದ ಭಾನುವಾರ ದಿಯುವಿನ ನಾಗೋವಾ ಬೀಚ್ ನಲ್ಲಿ ಪ್ಯಾರಾಸೈಲಿಂಗ್ ಮಾಡುತ್ತಿದ್ದಾಗ ಅವರ ಪ್ಯಾರಾಚೂಟ್ ನ ಹಗ್ಗ ತುಂಡಾದ ಪರಿಣಾಮ ಸಮುದ್ರದ ಕಡೆಗೆ ಅವರು ಪ್ಯಾರಾಚೂಟ್ ನಲ್ಲೇ ಹೋಗಿದ್ದಾರೆ. ಕೂಡಲೇ ಇದನ್ನು ಗಮಿಸಿದ ಬೀಚ್ ನಲ್ಲಿದ್ದ ಜೀವರಕ್ಷಕ ಸಿಬ್ಬಂದಿ ದಂಪತಿಯನ್ನು ರಕ್ಷಿಸಿದ್ದಾರೆ. ಲೈಫ್ ಜಾಕೆಟ್ ಧರಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Join Whatsapp