ಮುಂಬೈ: ಹೋಳಿ ಆಟದ ಬಣ್ಣ ತೊಳೆಯಲೆಂದು ಸ್ನಾನಗೃಹಕ್ಕೆ ಹೋಗಿದ್ದ ದಂಪತಿ ಅಲ್ಲೇ ಮೃತಪಟ್ಟ ಘಟನೆ ಮುಂಬೈಯಲ್ಲಿ ನಡೆದಿದೆ.
ಗೀಸರ್ ಗ್ಯಾಸ್ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ದೀಪಕ್ ಶಾ (42) ಹಾಗೂ ರೀನಾ ಶಾ (39) ಮೃತಪಟ್ಟವರು. ಇಬ್ಬರೂ ಫ್ಲ್ಯಾಟ್ ನಲ್ಲಿರುವ ತಮ್ಮ ಸ್ನೇಹಿತರೊಂದಿಗೆ ಹೋಳಿ ಆಡಿ ಸಂಭ್ರಮಿಸಿದ್ದಾರೆ. ಬಳಿಕ ಮೈತುಂಬಾ ಮೆತ್ತಿದ್ದ ಬಣ್ಣವನ್ನು ತೊಳೆಯಲೆಂದು ಪತಿ, ಪತ್ನಿ ಇಬ್ಬರೂ ಮನೆಯ ಸ್ನಾನಗೃಹಕ್ಕೆ ಹೋಗಿದ್ದಾರೆ. ಇತ್ತ ಸಂಬಂಧಿಕರಿಂದ ದಂಪತಿಗೆ ಹಲವು ಬಾರಿ ಕರೆ ಬಂದರೂ ಸ್ವೀಕರಿಸದ ಕಾರಣ ಫ್ಲ್ಯಾಟ್ ನ ಪರ್ಯಾಯ ಕೀ ಬಳಸಿ ಸ್ನಾನಗೃಹದ ಬಾಗಿಲು ತೆರೆದಿದ್ದಾರೆ. ಈ ವೇಳೆ ದಂಪತಿ ಪ್ರಜ್ಞಾಹೀನರಾಗಿ ಬಿದ್ದಿರುವುದನ್ನು ನೋಡಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.