ಇಬ್ಬರು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ

Prasthutha|

ತಿರುವನಂತಪುರಂ: ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಎರ್ನಾಕುಲಂನ ಕದಮಕ್ಕುಡಿ ಎಂಬಲ್ಲಿ ನಡೆದಿದೆ.

- Advertisement -


ಮೃತರನ್ನು ನಿಜೋ (39), ಪತ್ನಿ ಶಿಲ್ಪಾ (29), ಮಕ್ಕಳನ್ನು ಅಬ್ಲೆ (7) ಹಾಗೂ ಅರೋನ್ (5) ಎಂದು ಗುರುತಿಸಲಾಗಿದೆ.


ಹಣದ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ನಿಜೋ ಹಾಗೂ ಶಿಲ್ಪಾ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾದರೆ, ಇಬ್ಬರು ಮಕ್ಕಳು ಬೆಡ್ ಮೇಲೆ ಶವವಾಗಿ ಬಿದ್ದಿದ್ದರು.

- Advertisement -


ಪೊಲೀಸರ ಪ್ರಕಾರ, ದಂಪತಿ ಮನೆಯ ಮೇಲಿನ ಮಹಡಿಯಲ್ಲಿ ವಾಸವಾಗಿದ್ದರು. ಕೆಳಗಿನ ಮಹಡಿಯಲ್ಲಿ ನಿಜೋ ಪೋಷಕರು ಹಾಗೂ ಸಹೋದರ, ಆತನ ಕುಟುಂಬ ವಾಸವಾಗಿತ್ತು. ಮೊದಲು ಮಕ್ಕಳಿಗೆ ವಿಷವುಣಿಸಿ ಕೊಲೆ ಮಾಡಿದ್ದಾರೆ. ಬಳಿಕ ತಾವು ನೇಣಿಗೆ ಶರಣಾಗಿದ್ದಾರೆ. ಒಟ್ಟಿನಲ್ಲಿ ಹೆಚ್ಚುವರಿ ಆರ್ಥಿಕ ಹೊಣೆಗಾರಿಕೆ ಕುಟುಂಬವನ್ನು ಈ ಕೃತ್ಯ ಎಸಗುವಂತೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp