ಮಂಗಳೂರು: ದಕ್ಷಿಣ ಭಾರತದವರು ಬೇಕಾದರೆ ಹಿಂದಿ ಕಲಿಯಲಿ ಎಂಬ ಉತ್ತರದವರ ಪ್ರಜ್ಞೆ ಬದಲಾಗಬೇಕು. ಸಮಾಜದಲ್ಲಿ ಕಕ್ಕಿಲ್ಲಾಯರಂಥವರು ತತ್ವದೊಡನೆ ನಿಲ್ಲುವಾಗ ದ್ವೀಪದಂತಾಗುತ್ತಾರೆ. ಆದರೆ ಅವರ ವಿವೇಕದ ನುಡಿ ಬಲಯುತವಾದುದಾಗಿತ್ತು. ವಶೀಕರಿಸುವ ಪ್ರವಚನಕಾರರು ಸಾಕಷ್ಟು ಜನರಿದ್ದಾರೆ. ಆದರೆ ಜನಪರ ನಿಲುವಿನವರು ಯಾರಿದ್ದಾರೆ ಎನ್ನುವುದು ಮುಖ್ಯ ಎಂದು ದೆಹಲಿಯಲ್ಲಿ ಉಪನ್ಯಾಸಕರಾಗಿರುವ ಪ್ರೊ. ಅಪೂರ್ವಾನಂದ ಹೇಳಿದ್ದಾರೆ.
ಸಮನ್ವಯ ವೇದಿಕೆ, ಎಂ. ಎಸ್. ಕೃಷ್ಣ ಮೆಮೋರಿಯಲ್ ಟ್ರಸ್ಟ್ ಮಂಗಳೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ-2022 ದಲ್ಲಿ ಮಾತನಾಡಿದರು.
ಈಗ ಜೈ ಶ್ರೀರಾಮ್ ಕಾಲ. ಅದು ಮನ ತುಂಬಿದ್ದಲ್ಲ. ಭಾರತ ಮಾತಾ ಕಿ ಜೈ ಜೊತೆಗೆ ಅದು ತುಳು ನೆಲದಲ್ಲೂ ಮೊಳಗುತ್ತದೆ. ಇದು ಹಿಂದಿ ಹೇರಿಕೆ ಎಂದು ಕನ್ನಡಿಗರಿಗೆ ಏಕೆ ತಿಳಿಯುವುದಿಲ್ಲ. ಈ ಶಕ್ತಿಗಳು ಭಾಷಾ ವೈವಿಧ್ಯತೆ ಅಳಿಸುವ ಮೂಲಕ ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಹಾಳು ಮಾಡುತ್ತಿದ್ದಾರೆ. ಭಾರತ ಮಾತಾಕಿ ಜೈ ದೇಶದ ಪರವಲ್ಲ, ಕೆಲವರ ಜನಾಂಗೀಯ ಅಮಲು. ಜೈ ಶ್ರೀರಾಮ್ ಉತ್ತರ ಪ್ರದೇಶದಲ್ಲಿ ಮುಸ್ಲಿಂ ದ್ವೇಷಕ್ಕಾಗಿ ಬಳಕೆಯಾಗುತ್ತಿದೆ ಎಂದು ಅಪೂರ್ವಾನಂದರು ಹೇಳಿದರು.
ಮಾತಿನಲ್ಲಿ ಮನನೀಯ ಮತ್ತು ಮನಮುರಿಯ ಎರಡು ಬಗೆಯಿದೆ. ಮಾತನಾಡುವ ಸ್ಟೈಲ್ ಮುಖ್ಯವಲ್ಲ, ಪರಸ್ಪರ ಮಾತು ಮುಟ್ಟುವುದು ಅಗತ್ಯ. ಕನ್ಹಯ್ಯರ ಪ್ರಾಮಾಣಿಕತೆ ಬಯಸದವರು ಅವರು ಖಂಡಿಸಿ ಪ್ರಚಾರ ಮಾಡುತ್ತಾರೆ. ಇಂತಹ ಮಾತಿನ ಸತ್ಯಾಸತ್ಯತೆ ಒರೆಗೆ ಹಚ್ಚದೆ ಭಾರತದ ಇಂದಿನ ದುರಂತ. ದೇಶವಿರೋಧಿ ಶಕ್ತಿಗಳು ಸತ್ಯಕ್ಕಿಂತ ದೇಶ ಪ್ರೇಮದಂತಹ ಘೋಷಣೆಗಳಿಂದ ಬದುಕುತ್ತಿದ್ದಾರೆ ಎಂದು ಅಪೂರ್ವಾನಂದರು ಹೇಳಿದರು.
ಜೈ ಶ್ರೀರಾಮ ಘೋಷಣೆ ಮುಸ್ಲಿಂ, ಕ್ರಿಶ್ಚಿಯನ್ ಪ್ರದೇಶದಲ್ಲಿ, ಅವರ ಆರಾಧನಾಲಯಗಳ ಬಳಿ ಕೂಗುವ ಅಗತ್ಯ ಏನಿದೆ? ದ್ವೇಷವೇ ಇವರ ನಡವಳಿಕೆ ಆಗುತ್ತಿದೆ. ನಾವು ದ್ವೇಷ ಮತ್ತು ಪ್ರೀತಿ ಹೊತ್ತು ಹುಟ್ಟುತ್ತೇವೆ. ಆದರೆ ದ್ವೇಷವು ಸ್ವಾಭಾವಿಕವಾದುದಲ್ಲ. ವಿವಿಗಳಲ್ಲಿ ಜೆಎನ್ ಯುವನ್ನು ಇವರ ರಾಜಕೀಯ ದ್ವೇಷದ ತಯಾರಿಕೆಗಾಗಿದೆ ಎಂದು ಅಪೂರ್ವಾನಂದರು ಹೇಳಿದರು.
ಜೆಎನ್ ಯು ನ ಉಮರ್ ಖಾಲಿದ್ ನನ್ನು ಬಂಧಿಸಿ ಪಾಕಿಸ್ತಾನದ ಏಜೆಂಟ್ ಎನ್ನಲಾಯಿತು. ಅದಕ್ಕೆ ಯಾವ ಸಾಕ್ಷ್ಯವನ್ನೂ ನೀಡದೆ ಕಾಡಲಾಯಿತು. ಮಾಧ್ಯಮಗಳು ಸಹ ಆಳುವವರ ಕೈವಾರಿಗಳಂತೆ ಬರೆದರು. ಟೀವಿ ಚರ್ಚೆಗಳಲ್ಲಿ ಆರೋಪ ಹೊರಿಸಿದ ಎಲ್ಲರನ್ನೂ ದೇಶದ್ರೋಹಿಗಳು ಎನ್ನಲಾಯಿತು. ಇದು ಸಿದ್ಧ ದ್ವೇಷ ಎಂದು ಅವರು ಹೇಳಿದರು.
ಪಠ್ಯ ಪುಸ್ತಕಗಳ ತಿರುಚುವಿಕೆ, ದೀನದಯಾಳ್ ಇತ್ಯಾದಿ ಹೆಸರುಗಳ ಅತಿ ಬಳಕೆ, ಇತಿಹಾಸ ತಿದ್ದುವುದು ಎಂದು ಇವರ ಸಮಾಜ ಅದುಮುವ ಕೆಲಸಕ್ಕೆ ಕೊನೆಯಿಲ್ಲ ಎಂದು ಕಿಡಿಕಾರಿದರು.
ಡಾ. ಶ್ರೀನಿವಾಸ ಕಕ್ಕಿಲ್ಲಾಯ ಮತ್ತಿತರರು ಭಾಗವಹಿಸಿದ್ದರು.