ದೇಶದ ಜನತೆ ಪರ್ಯಾಯದ ನಿರೀಕ್ಷೆಯಲ್ಲಿದ್ದಾರೆ ಎಂದು ಲೋಕಸಭಾ ಚುನಾವಣೆಯ ಫಲಿತಾಂಶ ನಿರೂಪಿಸುತ್ತಿದೆ: ಅಶ್ರಫ್ ಮೌಲವಿ

Prasthutha|

►ಎಸ್.ಡಿ‌.ಪಿ.ಐ ಕಾರ್ಯಕರ್ತರ ಸಮಾವೇಶ

- Advertisement -

ಮಂಜೇಶ್ವರ: ದೇಶದ ಜನತೆ ಪರ್ಯಾಯದ ನಿರೀಕ್ಷೆಯಲ್ಲಿದ್ದಾರೆ ಎಂಬುದನ್ನು ಲೋಕಸಭಾ ಚುನಾವಣೆಯ ಫಲಿತಾಂಶ ನಿರೂಪಿಸುತ್ತಿದೆ ಎಂದು ಎಸ್.ಡಿ.ಪಿ.ಐ ಕೇರಳ ರಾಜ್ಯಾಧ್ಯಕ್ಷರಾದ ಮೂವಾಟ್ಟುಪ್ಪುಝ ಅಶ್ರಫ್ ಮೌಲವಿ ಹೇಳಿದರು.


‘ಇದುವೇ ದಾರಿ, ಇದುವೇ ಗೆಲುವು’ ಎಂಬ ಘೋಷಣೆಯೊಂದಿಗೆ ಎಸ್‌.ಡಿ.ಪಿ‌ಐ ದೇಶಾದ್ಯಂತ ಆಯೋಜಿಸಿದ ಅಭಿಯಾನದ ಭಾಗವಾಗಿ ಎಸ್.ಡಿ.ಪಿ.ಐ ಮಂಜೇಶ್ವರ ಸಮಿತಿ ಅಯೋಜಿಸಿದ ಕಾರ್ಯಕರ್ತರ ಸಮಾವೇಶವನ್ನು ಉಧ್ಘಾಟಿಸಿ ಅವರು ಮಾತನಾಡುತ್ತಿದ್ದರು.

- Advertisement -


ಚುನಾವಣೆಯ ಫಲಿತಾಂಶವು ನಿರಂಕುಶ ರಾಷ್ಟ್ರವನ್ನು ಸ್ಥಾಪಿಸಲು ಮುಂದಾದ ಬಿಜೆಪಿಯ ದುರಹಂಕಾರಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಅವರು ಹೇಳಿದರು.


ಭಾನುವಾರ ಸಂಜೆ ಗಾಂಧಿನಗರ ಎ.ಎಚ್.ಪ್ಯಾಲೇಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಕ್ಷೇತ್ರದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು. ನೂತನವಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಶರೀಫ್ ಪಾವೂರ್ ಸ್ವಾಗತಿಸಿ ಪಕ್ಷದ ಮಂಡಲ ಅಧ್ಯಕ್ಷರಾದ ಅಶ್ರಫ್ ಬಡಾಜೆ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಇಕ್ಬಾಲ್ ಹೊಸಂಗಡಿ, ಜಿಲ್ಲಾ ಕಾರ್ಯದರ್ಶಿ ಎ.ಎಚ್.ಮುನೀರ್, ಜಿಲ್ಲಾ ಸಮಿತಿ ಸದಸ್ಯ ಅನ್ಸಾರ್ ಗಾಂಧಿ ನಗರ, ಮಂಜೇಶ್ವರಂ ಬ್ಲಾಕ್ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ ಮಾತನಾಡಿದರು. ಕ್ಷೇತ್ರದ ಉಪಾಧ್ಯಕ್ಷ ರಶೀದ್ ಗಾಂಧಿ ನಗರ, ಕ್ಷೇತ್ರ ಜೊತೆ ಕಾರ್ಯದರ್ಶಿ ರಝಾಕ್, ತಾಜು , ಆರೀಫ್ ಖಾದರ್ ಜನಪ್ರತಿನಿಧಿಗಳಾದ ಅನ್ವರ್ ಆರಿಕ್ಕಾಡಿ, ಕುಲ್ಸುಮ್ಮ, ರೈಶು ಮಂಜೇಶ್ವರ, ರಝಾಕ್ ಗಾಂಧಿನಗರ ಉಪಸ್ಥಿತರಿದ್ದರು. ಕೋಶಾಧಿಕಾರಿ ಜಲೀಲ್
ಧನ್ಯವಾದ ಸಮರ್ಪಿಸಿದರು.

Join Whatsapp