ರಾಷ್ಟ್ರೀಯ ಹೆದ್ದಾರಿಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಶಂಕೆ: ಹೋರಾಟಕ್ಕೆ ಇಳಿದ SDPI

Prasthutha|

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಮಂಗಳೂರಿನ ಕುಲಶೇಖರದಿಂದ ಸಾಣೂರು ವರೆಗಿನ 45 ಕಿಮೀ ಹೆದ್ದಾರಿ ಚತುಷ್ಪಥ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗುತ್ತಿದ್ದು,  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನಿಯೋಗ ಸ್ಥಳ ಪರಿಶೀಲನೆ ನಡೆಸಿ ಭ್ರಷ್ಟಾಚಾರ ನಡೆದಂತಹ ವಿಚಾರದಲ್ಲಿ ಮಾಹಿತಿ ಕಲೆ ಹಾಕಿಕೊಂಡಿದೆ .

- Advertisement -

ರಾಷ್ಟ್ರೀಯ ಹೆದ್ದಾರಿ 169 ರ ಚತುಷ್ಪಥ ಯೋಜನೆ ಕಾಮಗಾರಿಯ ಭೂಸ್ವಾಧೀನ  ಪ್ರಕ್ರಿಯೆಗೆ ಸಂಬಂಧಪಟ್ಟಂತೆ ನಡೆದಂತಹ ಭ್ರಷ್ಟಾಚಾರದ ವಿರುದ್ಧ ಸಂತ್ರಸ್ತರು SDPI ಪಕ್ಷದ ನಾಯಕರನ್ನು ಸಂಪರ್ಕಿಸಿ ಸಂತ್ರಸ್ತರಿಗೆ ನ್ಯಾಯವನ್ನು ದೊರಕಿಸಿಕೊಡಬೇಕೆಂದು ಅಹವಾಲು ಸಲ್ಲಿಸಿದರು. ಇದನ್ನು ಗಂಭೀರವಾಗಿ  ಪರಿಗಣಿದ SDPI  ದಕ್ಷಿಣ  ಕನ್ನಡ ಜಿಲ್ಲಾ ಸಮಿತಿಯ ನಿಯೋಗವು ಸಂತ್ರಸ್ತರನ್ನ ಭೇಟಿಯಾಗಿ ಸ್ಥಳ ಪರಿಶೀಲನೆ ಮಾಡಿದೆ. 180 ಎಕರೆ ಜಮೀನು  ಭೂಸ್ವಾಧೀನ ಬಗ್ಗೆ 2017 ರ ಡಿಸೆಂಬರ್ ತಿಂಗಳಲ್ಲಿ  ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಅಂತಿಮ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ನಂತರ ಸರ್ವೇ ನಡೆದು ಸಂಬಂಧ ಪಟ್ಟ ಜಮೀನು ಮಾಲಕರಿಗೆ ನೋಟಿಸ್ ನೀಡಿ ಪತ್ರಿಕೆ ಮೂಲಕ ಜಾಹೀರಾತು ನೀಡಿ ಸರ್ವೇ ನಡೆಸಲಾಯಿತು. ಆದರೆ ಇದೀಗ ಪ್ರಭಾವಿ ವ್ಯಕ್ತಿಗಳ ಹಿತಾಸಕ್ತಿಗೆ ಮಣಿದ  ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರೂಟ್ ಮ್ಯಾಪನ್ನು ಬದಲಾಯಿಸಿದ್ದಾರೆ. ಇದರ ಹಿಂದೆ ಹಲವಾರು ಪ್ರಭಾವಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮಧ್ಯೆ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಅನುಮಾನಗಳು ದಟ್ಟವಾಗುತ್ತಿದೆ. ಈ ಬಗ್ಗೆ ಇತ್ತೀಚೆಗೆ ವೈರಲಾದ ಆಡಿಯೋವೊಂದು ಸಾಕ್ಷಿಯಾಗಿದೆ. ಅದರೊಂದಿಗೆ ಪರಿಹಾರ ವಿತರಣೆಯಲ್ಲಿ ಕೃಷಿ ಭೂಮಿಗೆ ಅಲ್ಪ ಪ್ರಮಾಣದ ಪರಿಹಾರ ಘೋಷಿಸಿದ್ದು, ಇದು ರೈತರನ್ನು ಸರಕಾರ ಬೀದಿಪಾಲು ಮಾಡಿದ್ದಾರೆ.   ಹೊಸ ಮಾರ್ಗ ಬದಲಾವಣೆಯಿಂದ ಕೈಗಾರಿಕಾ ಪ್ರದೇಶದಲ್ಲಿ ಸಮಸ್ಯೆ ಉಲ್ಬಣ ಆಗಿದೆ. ಹೊಸ ರೂಟ್ ಮ್ಯಾಪಿನಲ್ಲಿ ಕೈಗಾರಿಕಾ ವಲಯಕ್ಕೆ ಅತ್ಯಗತ್ಯ ವಾದ ಸರ್ವೀಸ್ ರಸ್ತೆ ಮಾಯವಾಗಿದೆ. ಇದು ಯಾರ ಹಿತ ಕಾಪಾಡಲು ಕೈಗೊಂಡ ತೀರ್ಮಾನ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಬೇಕು . ಸರ್ವೇ ನಡೆಸಲು ಅಧಿಕಾರ ಹೊಂದಿರುವ ಸಂಸ್ಥೆಯು ತನಗಿಷ್ಟ ಬಂದಂತೆ ಸರ್ವೆ ನಡೆಸಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ, ಈ ಬಗ್ಗೆ ಸಂತ್ರಸ್ತರು ಇತ್ತೀಚೆಗೆ ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಆರೋಪ ಹೊರಿಸಿದರು. ಈ ಎಲ್ಲಾ ಅವ್ಯವಹಾರ ಗಳ ಹಿನ್ನೆಲೆಯಲ್ಲಿ ಶಾಮೀಲಾಗಿರುವ ಕಾಣದ ಕೈಗಳನ್ನು ಕಾನೂನಿನ ಕಟಕಟೆಯಲ್ಲಿ ತಂದು ನಿಲ್ಲಿಸಲು SDPI ಸಂತ್ರಸ್ತರ ಪರವಾಗಿ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಜನಾಂದೊಲನ ಮತ್ತು ಕಾನೂನು ಹೋರಾಟ ನಡೆಸಲಿದೆ ಎಂದು ನಿಯೋಗದ ನೇತೃತ್ವ ವಹಿಸಿದ SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಎಚ್ಚರಿಸಿದ್ದಾರೆ

 ನಿಯೋಗದಲ್ಲಿ  ರಾಜ್ಯ ಸಮಿತಿ  ಸದಸ್ಯರಾದಂತಹ ರಿಯಾಜ್ ಕಡಂಬು ,ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ,ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಸಮಿತಿ ಕ್ಷೇತ್ರಾಧ್ಯಕ್ಷರಾದ ಆಸಿಫ್ ಕೋಟೆಬಾಗಿಲು, ಕಾರ್ಯದರ್ಶಿ ಅಜರ್ ತೊಡಾರ್ ,ಮೂಡದಿದ್ದರೆ ಬ್ಲಾಕ್ ಅಧ್ಯಕ್ಷ ಆಸಿಫ್ ತೊಡಾರ್, ಕಾರ್ಯದರ್ಶಿ ಶಹರಾಜ್, ಸಂತ್ರಸ್ತರಾದ ನಾಝಿಮ್ ಕಡಲಕೆರೆ ಉಪಸ್ಥಿತರಿದ್ದರು ಹಲವಾರು ಸಂತ್ರಸ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಅವರ ಅಹವಾಲುಗಳನ್ನು ಕೇಳಲಾಯಿತು.

Join Whatsapp