ಕೊರೊನಾ, ಒಮಿಕ್ರಾನ್ ಭೀತಿ ಬೆನ್ನಲ್ಲೇ ಕೇರಳದಲ್ಲಿ ‘ಹಕ್ಕಿಜ್ವರ’ ಪ್ರಕರಣ ಪತ್ತೆ

Prasthutha|

ಕೇರಳ : ದೇಶದಲ್ಲಿ ಒಂದೆಡೆ ಕೊರೊನಾ, ಒಮಿಕ್ರಾನ್ ಭೀತಿ ಶುರುವಾಗಿದೆ. ಈ ಬೆನ್ನಲ್ಲೇ ಕೇರಳದಲ್ಲಿ ‘ಹಕ್ಕಿಜ್ವರ’ ಪ್ರಕರಣ ಪತ್ತೆಯಾಗಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

- Advertisement -

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ಪ್ರಕರಣ ಪತ್ತೆಯಾಗಿದ್ದು, ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ಗೆ ಕಳುಹಿಸಲಾದ ಕೆಲವು ಮಾದರಿಗಳಲ್ಲಿ ಹಕ್ಕಿ ಜ್ವರವನ್ನು ರಾಜ್ಯ ಪಶುಸಂಗೋಪನಾ ಇಲಾಖೆ ಗುರುವಾರ ದೃಢಪಡಿಸಿದೆ.

ಏವಿಯನ್ ಫ್ಲೂ ಎಂದೂ ಕರೆಯಲ್ಪಡುವ ಹಕ್ಕಿ ಜ್ವರ ಪಕ್ಷಿಗಳಲ್ಲಿ ಗಾಳಿಯಿಂದ ಹರಡುವ ವೈರಸ್‌ನಿಂದ ಉಂಟಾಗುವ ವಿವಿಧ ರೀತಿಯ ಸೋಂಕು ಜ್ವರವಾಗಿದೆ. ಇದು ಅಪರೂಪವಾಗಿ ಮನುಷ್ಯರಿಗೆ ಹರಡಲಿದ್ದು, ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಂಭವವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇಲ್ಲಿನ ರೈತರು ಬಾತುಕೋಳಿಗಳನ್ನು ಸಾಕುತ್ತಾರೆ ಇಲ್ಲಿ ಹಕ್ಕಿ ಜ್ವರ ಕಾಣಿಸುಕೊಳ್ಳುವುದೂ ಜಾಸ್ತಿ , ಬಾತುಕೋಳಿಯಿಂದ ಹಕ್ಕಿ ಜ್ವರದ ಪ್ರಕರಣಗಳು ವರದಿಯಾಗುತ್ತದೆ ಎಂದು ಹೇಳಲಾಗಿದೆ.

Join Whatsapp