ಇಬ್ಬರು ಮುಸ್ಲಿಮ್ ಯುವಕರಿಗೆ ಚಿತ್ರಹಿಂಸೆ ನೀಡಿ, ಪರಸ್ಪರ ಲೈಂಗಿಕ ಸಂಪರ್ಕ ನಡೆಸುವಂತೆ ಬೆದರಿಸಿದ ಪೊಲೀಸರು

Prasthutha|

ಜಾರ್ಖಂಡ್: ಇಬ್ಬರು ಮುಸ್ಲಿಮ್ ಯುವಕರನ್ನು ಬಂಧಿಸಿ ಚಿತ್ರಹಿಂಸೆಗೊಳಪಡಿಸಿದ ಪೊಲೀಸರು, ಅವರಿಬ್ಬರನ್ನೂ ಪರಸ್ಪರ ಲೈಂಗಿಕ ಸಂಪರ್ಕ ನಡೆಸುವಂತೆ ಒತ್ತಾಯಿಸಿ, ಪ್ರವಾದಿಯನ್ನು ನಿಂದಿಸಿರುವ ಆಘಾತಕಾರಿ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

- Advertisement -

ಮುಹಮ್ಮದ್ ಅರ್ಝು ಮತ್ತು ಮುಹಮ್ಮದ್ ಔರಂಗಜೇಬ್ ಎಂಬ ಇಬ್ಬರು ಮುಸ್ಲಿಮ್ ಯುವಕರನ್ನು ಅಗಸ್ಟ್ 26 ರಂದು ಜಾರ್ಖಂಡ್ ನ ಜಮ್ಶೇಡ್ ಪುರ ಜಿಲ್ಲೆಯ ಕದ್ಮಾ ಠಾಣೆಯಲ್ಲಿ ಏಳು ಮಂದಿ ಪೊಲೀಸರು ತಮ್ಮ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರು ಮುಸ್ಲಿಮ್ ವಿರೋಧಿ ಹೇಳಿಕೆಯನ್ನು ನೀಡಿ ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಅವರು ದೂರಿದ್ದಾರೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಈಸ್ಟ್ ಸಿಂಗ್ಭೂಮ್ ಪೊಲೀಸ್ ವರಿಷ್ಠಾಧಿಕಾರಿ ಎಮ್ ತಮಿಳ್ ವಾನನ್ ಎಂಬವರಿಗೆ ದೂರು ಸಲ್ಲಿಸಿದ್ದಾರೆ. ಆದರೆ ಪೊಲೀಸರು ಇದುವರೆಗೆ ಎಫ್ಐಆರ್ ದಾಖಲಿಸಿಲ್ಲ. ಆದ್ದರಿಂದ ಈ ಸಂಬಂಧ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಾರ್ಖಂಡ್ ಏಕತಾ ಮೋರ್ಚಾದ ಕಾರ್ಯಕರ್ತ ಅಫ್ತಾಬ್ ಎಂ. ಗೆ ತಿಳಿಸಿದ್ದಾರೆ.

ಯುವ ಜೋಡಿಯೊಂದು ಪರಾರಿಯಾಗಿತ್ತು. ಪರಾರಿಯಾದ ಯುವಕನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿತ್ತು. ಪರಾರಿಯಾದ ಯುವಕ ಔರಂಗಜೇಬ್ ನ ಗೆಳೆಯ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆಯಿಸಿದ್ದರು.

MGM ಆಸ್ಪತ್ರೆಯಲ್ಲಿ ಅವರ ವೈದ್ಯಕೀಯ ವರದಿಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಹೇಳಿದೆ. ಅವರಿಗೆ ಔಷಧಿಗಳನ್ನು ಸೂಚಿಸಲಾಯಿತು. ಮೆದುಳಿನ CT ಸ್ಕ್ಯಾನ್ ಮಾಡುವಂತೆ ಔರಂಗಜೇಬ್ಗೆ ಶಿಫಾರಸು ಮಾಡಲಾಗಿದೆ.

Join Whatsapp