ಪಕ್ಷೇತರಾಗಿ ಸ್ಪರ್ಧಿಸಿರಿ: ವೀಣಾ ಕಾಶಪ್ಪನವರಿಗೆ ಅಭಿಮಾನಿಗಳ ಆಗ್ರಹ

Prasthutha|

ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ‌ ಕಾಂಗ್ರೆಸ್ ಸ್ಪರ್ಧೆಗೆ ಅವಕಾಶ ನೀಡದಿದ್ದರೆ ಪಕ್ಷೇತರಾಗಿ ಸ್ಪರ್ಧಿಸಿರಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಅಭಿಮಾನಿಗಳ ಬಳಗದಿಂದ ಚರಂತಿಮಠದಲ್ಲಿ ಆಯೋಜಿಸಿದ್ದ ಸ್ವಾಭಿಮಾನಿ ಕಾರ್ಯಕರ್ತರು ವಿಣಾ ಅವರಿಗೆ ಆಗ್ರಹಿಸಿದ್ದಾರೆ.

- Advertisement -

ಬೇಕೇ, ಬೇಕೇ ಬೇಕು, ನ್ಯಾಯ ಬೇಕು’ ಎಂದು ಬೃಹತ್ ಸಂಖ್ಯೆಯಲ್ಲಿ ಸೇರಿದ ವೀಣಾ ಕಾಶಪ್ಪನವರ ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಐದು ವರ್ಷಗಳ ಕಾಲ ಕ್ಷೇತ್ರದಾದ್ಯಂತ ಸಂಚರಿಸಿ ಸಂಘಟನೆ ಮಾಡಿದವರಿಗೆ ಟಿಕೆಟ್‌ ನೀಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಭ್ಯರ್ಥಿ ಬದಲಾಯಿಸಿ ವೀಣಾ ಅವರಿಗೆ ಟಿಕೆಟ್‌ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡನ್ನು ಒತ್ತಾಯಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಟಿಕೆಟ್‌ನಿಂದ ವಂಚಿತವಾಗಿದೆ. ವೀಕ್ಷಕರು ಬಂದಾಗ ಸಂಯುಕ್ತಾ ಪಾಟೀಲ ಇದ್ದರಾ? ಇಲ್ಲದವರಿಗೆ ನೀಡುವುದಾದರೆ, ಅಭಿಪ್ರಾಯ ಕೇಳುವ ಅವಶ್ಯಕತೆ ಏನಿತ್ತು? ಜಿಲ್ಲೆಯ ಅಸ್ಮಿತೆ ಪರಿಗಣಿಸಿ, ವೀಣಾ ಅವರಿಗೆ ಟಿಕೆಟ್‌ ನೀಡಬೇಕು ಎಂದು ವಿಜಯ ಮಹಾಂತೇಶ ಗದ್ದನಕೇರಿ ಎಂಬವರು ಆಗ್ರಹಿಸಿದರು.

- Advertisement -

ಮುಖಂಡ ಬಲರಾಮ ನಾಯಕ ಮಾತನಾಡಿ, ವಿಜಯಪುರಕ್ಕೆ ನಾನು ಟಿಕೆಟ್‌ ಕೇಳಿದಾಗ ಇದೇ ಸಚಿವ ಶಿವಾನಂದ ಪಾಟೀಲ ಬಾಗಲಕೋಟೆ ಜಿಲ್ಲಯವರಾಗಿ ಇಲ್ಲೇಕೆ ಟಿಕೆಟ್‌ ಕೇಳುತ್ತೀರಿ ಎಂದು ಬೈದು ಕಳುಹಿಸಿದ್ದರು. ಈಗ ಅವರ ಮಗಳಿಗೇಕೆ ಇಲ್ಲಿ ಎಂದು ಪ್ರಶ್ನಿಸಿದರು. ಶಾಸಕರು ಅಡ್ಜ್‌ಸ್ಟ್‌ಮೆಂಟ್‌ ಆಗಿದ್ದಾರೆ. ಟಿಕೆಟ್ ನೀಡಿಕೆಯಲ್ಲಿ ತಪ್ಪಾಗಿದೆ ಎಂದು ಹೇಳಲಿಕ್ಕೆ ಶಾಸಕರಿಗೆ ಏನಾಗಿದೆ ಎಂದರು.



Join Whatsapp