ಜ್ಯೂಸ್ ಬಾಟಲಿ ಸಾಗಿಸುತ್ತಿದ್ದ ಕಂಟೈನರ್ ಪಲ್ಟಿ: ತಂಪು ಪಾನೀಯ ಲೂಟಿ ಮಾಡಿದ ಸಾರ್ವಜನಿಕರು!

Prasthutha|

ಕೊಲ್ಹಾಪುರ: ತಂಪು ಪಾನೀಯ ಸಾಗಿಸುತ್ತಿದ್ದ ಕಂಟೈನರ್ ಒಂದು ಮಗುಚಿ ಬಿದ್ದ ಘಟನೆ ಕೊಲ್ಹಾಪುರದ ಪುಯಿಖಾಡಿ ಘಾಟ್’ನಲ್ಲಿ ಶನಿವಾರ ಸಂಭವಿಸಿದ್ದು, ಸಾರ್ವಜನಿಕರು ಬೇಕಾದಷ್ಟು ಜ್ಯೂಸ್ ಕುಡಿದು ಉಳಿದಿದ್ದನ್ನು ಮನೆಗೆ ಕೊಂಡೊಯ್ಯುತ್ತಿದ್ದ ದೃಶ್ಯ ಕಂಡುಬಂತು.

- Advertisement -


ಗೋವಾ ಕಡೆಗೆ ತಂಪು ಪಾನೀಯಗಳನ್ನು ಸಾಗಿಸುತ್ತಿದ್ದ ಕಂಟೇನರ್ ಇಂದು ಮುಂಜಾನೆ ಪುಯಿಖಾಡಿ ಘಾಟ್ ನಲ್ಲಿ ಪಲ್ಟಿಯಾಗಿದೆ. ಕಂಟೇನರ್ ಪಲ್ಟಿಯಾದ ನಂತರ, ರಸ್ತೆಯಲ್ಲಿ ಹೋಗುತ್ತಿದ್ದ ಜನರು ಅಕ್ಷರಶಃ ಕಂಟೇನರ್ ಅನ್ನು ಲೂಟಿ ಮಾಡಿದರು. ದ್ವಿ ಚಕ್ರ, ನಾಲ್ಕು ಚಕ್ರದ ವಾಹನ ಸವಾರರು ಸಹ ವಾಹನಗಳನ್ನು ನಿಲ್ಲಿಸಿ ತಂಪು ಪಾನೀಯ ಬಾಟಲಿಗಳನ್ನು ಕೊಂಡೊಯ್ದರು. ಕರ್ವಿರ್ ತಾಲ್ಲೂಕಿನ ಪಿರ್ಚಿವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.


ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದರಿಂದ ಯಾರೂ ಹೆಚ್ಚಾಗಿ ಗಮನ ಹರಿಸಲಿಲ್ಲ. ಬೆಳಕು ಹರಿದ ಬಳಿಕ ವಿಷಯ ಎಲ್ಲೆಡೆ ತಿಳಿದು ವಾಹನಗಳಲ್ಲಿ ಬಂದು ಜ್ಯೂಸ್ ಬಾಟಲಿ ಕೊಂಡೊಯ್ಯುತ್ತಿದ್ದರು. ಒಂದು ಗಂಟೆಯೊಳಗೆ, ಇಡೀ ಕಂಟೇನರ್ ಅನ್ನು ನಾಗರಿಕರು ಖಾಲಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲ್ಹಾಪುರದ ಕರ್ವೀರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp