ವಸತಿ ಗೃಹದಲ್ಲೇ ಪೊಲೀಸ್ ಕಾನ್ಸ್’ಟೇಬಲ್ ಬರ್ಬರ ಹತ್ಯೆ

Prasthutha|

ಬಳ್ಳಾರಿ: ಪೊಲೀಸ್ ವಸತಿ ಗೃಹದಲ್ಲಿ ಡಿಎಆರ್ ಕಾನ್ಸ್’ಟೇಬಲ್ ಒಬ್ಬರ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

- Advertisement -


ಮೃತ ಕಾನ್ಸ್ ಟೇಬಲ್’ರನ್ನು ಜಾಫರ್ ಎಂದು ಗುರುತಿಸಲಾಗಿದೆ.
ಬುಧವಾರ ರಾತ್ರಿ ಪೊಲೀಸ್ ವಸತಿ ಗೃಹದಲ್ಲಿ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಜಾಫರ್ ಅವರನ್ನು ವಿಮ್ಸ್’ಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಾಫರ್ ಮೃತಪಟ್ಟಿದ್ದಾನೆ.


2009ರಲ್ಲಿ ಡಿಎಆರ್ ಪೊಲೀಸ್ ಪೇದೆಯಾಗಿ ಜಾಫರ್ ನೇಮಕವಾಗಿದ್ದರು. ಜಾಫರ್ 2ನೇ ಮದುವೆಯಾಗಿದ್ದು, 2ನೇ ಪತ್ನಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೊದಲ ಹೆಂಡತಿ ಮುಸ್ಲಿಂ, ಎರಡನೇ ಹೆಂಡತಿ ಹಿಂದೂ ಧರ್ಮಕ್ಕೆ ಸೇರಿದವರು ಎಂಬ ಮಾಹಿತಿ ಲಭ್ಯವಾಗಿದೆ. ಮೊದಲ ಹೆಂಡತಿಯನ್ನು ತವರು ಮನೆಯಲ್ಲಿ ಬಿಟ್ಟಿದ್ದು, ಕಳೆದ ಕೆಲ ದಿನಗಳಿಂದ 2ನೇ ಪತ್ನಿ ಜತೆಗೆ ಜಗಳ ನಡೆದಿತ್ತು ಎನ್ನಲಾಗಿದೆ. ಪ್ರಕರಣವನ್ನು ಕೊಲೆಯ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಾಫರ್ ಅವರನ್ನು ಪ್ರಜ್ಞೆ ತಪ್ಪಿಸಿ ರಾಡಿನಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಗಾಂಧಿನಗರ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp