ಭಾರತದಲ್ಲಿ ಹಿಂಡೆನ್ ಬರ್ಗ್ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಲು ಸಂಚು ನಡೆಯುತ್ತಿದೆ: ಅಸದುದ್ದೀನ್ ಉವೈಸಿ

Prasthutha|

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು ಆರಂಭವಾದಾಗಿನಿಂದಲೂ ಅದಾನಿ ಮತ್ತು ಹಿಂಡೆನ್ ಬರ್ಗ್ ಸಂಬಂಧವಾಗಿ ಗದ್ದಲದ ಹೊರತು ಬೇರೇನನ್ನೂ ನಡೆಯುತ್ತಿಲ್ಲ. ಅಂತೂ ಬುಧವಾರ ಮಧ್ಯಾಹ್ನ ಪ್ರಧಾನಿ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮುರವರ ಭಾಷಣಕ್ಕೆ ಅಭಿನಂದನೆ ಸಲ್ಲಿಸಿದರು.

- Advertisement -


ರಾಜ್ಯ ಸಭೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರತಿಯೊಂದು ವಿಷಯವನ್ನೂ ಇಂದು ದೇಶದಲ್ಲಿ ಕೋಮು ಘರ್ಷಣೆಯದಾಗಿ ಮಾಡಲಾಗುತ್ತಿದೆ. ಪ್ರಧಾನಿ ಮೋದಿಯವರು ಹೆಚ್ಚು ಕಾಲ ಸಂಸತ್ತಿನಲ್ಲಿ ಇರಬೇಕಾದ ಅಗತ್ಯವಿದೆ ಎಂದು ಹೇಳಿದರು.


ಅದಾನಿ ಗುಂಪಿನ ಬಗ್ಗೆ ಹಿಂಡನ್ ಬರ್ಗ್ ಮಾಡಿರುವ ಆಪಾದನೆಗಳ ತನಿಖೆ ನಡೆಸುವಂತೆ ಪ್ರತಿಪಕ್ಷಗಳವರು ಇಂದು ಸಂಸತ್ತಿನಲ್ಲಿ ಒತ್ತಾಯ ಮಾಡಿದರು. ಅದಾನಿ ಕಂಪೆನಿಯ ಷೇರುಗಳು ದಿಢೀರನೆ ಇಳಿದಿರುವುದು ಜನರ ಅದರಲ್ಲೂ ಎಲ್’ಐಸಿ, ಎಸ್ ಬಿಐ ಹಣ ಹೊಡೆಯಲು ನಡೆದಿರುವ ಸಂಚು ಎಂದು ವಿರೋಧ ಪಕ್ಷಗಳ ಹಲವರು ಆರೋಪ ಮಾಡಿದರು. ಕೇಂದ್ರ ಸರಕಾರವು ಈ ಬಗ್ಗೆ ತನಖೆ ಮಾಡುವುದನ್ನು ಬಿಟ್ಟು ಕಾಲಹರಣ ಮಾಡುತ್ತಿದೆ ಎಂದು ಬಿಜೆಪಿಯವರ ಆಕ್ಷೇಪದ ನಡುವೆ ಪ್ರತಿ ಪಕ್ಷಗಳವರು ಜೋರಾಗಿ ಪ್ರತಿಪಾದಿಸಿದರು.

- Advertisement -


ಭಾರತದಲ್ಲಿ ಹಿಂಡೆನ್ ಬರ್ಗ್ ಸಂಸ್ಥೆಯ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಆರೋಪಿಸಿದರು.