ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಯ ಕಾಲರ್‌ ಹಿಡಿದ ಕಾಂಗ್ರೆಸ್ ನಾಯಕಿ

Prasthutha|

ಹೈದರಾಬಾದ್ :ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯ ಕೊರಳ ಪಟ್ಟಿ ಹಿಡಿದು ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

- Advertisement -

ರಾಹುಲ್ ಗಾಂಧಿಗೆ ಇಡಿ ಸಮನ್ಸ್ನ ವಿರುದ್ಧ ಹೈದರಾಬಾದ್‌ನಲ್ಲಿ ಪಕ್ಷದ ಪ್ರತಿಭಟನೆಯ ವೇಳೆ ಪೊಲೀಸ್ ಸಿಬ್ಬಂದಿ ಕೆಲ ನಾಯಕರನ್ನು ಕರೆದುಕೊಂಡು ಹೋಗುವಾಗ ರೇಣುಕಾ ಚೌಧರಿ ಅಧಿಕಾರಿಯೊಬ್ಬರ ಕಾಲರ್‌ ಹಿಡಿದುಕೊಂಡು ಎಳೆದಾಡಿದ ವೀಡಿಯೋ ವೈರಲ್ ಆಗಿದ್ದು ಟೀಕೆಗೆ ಗುರಿಯಾಗಿದೆ.


ಹಿರಿಯ ಕಾಂಗ್ರೆಸ್ ನಾಯಕಿಯಾದ ಚೌಧರಿ ಅವರು ಪೊಲೀಸ್ ಅಧಿಕಾರಿಯ ಕಾಲರ್ ಹಿಡಿದುಕೊಂಡು ತೀವ್ರ ವಾಗ್ವಾದ ನಡೆಸಿದ್ದು ನಂತರ ಅವರನ್ನು ಮಹಿಳಾ ಪೊಲೀಸ್ ಅಧಿಕಾರಿಗಳು ಹಿಡಿದು ಪೊಲೀಸ್ ವ್ಯಾನ್ ಕಡೆಗೆ ಎಳೆದೊಯ್ದಿದ್ದಾರೆ.



Join Whatsapp