ಸಂವಿಧಾನದ ರಕ್ಷಣೆಯ ಆಶಯ ಹೊಂದಿರುವ ಸಂಘಟನೆಗಳು ಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಒತ್ತಾಯ

Prasthutha|

ನವದೆಹಲಿ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ರಕ್ಷಣೆಯ ಆಶಯ ಹೊಂದಿರುವ ಸಂಘಟನೆಗಳು ಮತ್ತು ಜನರನ್ನು ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಭಾನುವಾರ ಆಹ್ವಾನಿಸಿದೆ.

- Advertisement -


‘ಪ್ರತಿಯೊಬ್ಬ ಭಾರತೀಯನ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಯಾತ್ರೆ ನಡೆಯಲಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ನಲ್ಲಿ ಹೇಳಿದ್ದಾರೆ.

ಜನವರಿ 14ರಿಂದ ಆರಂಭವಾಗಲಿರುವ ಈ ಯಾತ್ರೆಯು ಮಣಿಪುರದಿಂದ ಮುಂಬೈವರೆಗೆ ಸಾಗಲಿದೆ.



Join Whatsapp