ಟಿಕಮ್ ಗಢ: ಕಾಂಗ್ರೆಸ್ ನನಗೆ ಮೋಸ ಮಾಡಿದೆ. ಆ ಪಕ್ಷಕ್ಕೆ ಯಾರೂ ಮತ ಹಾಕಬೇಡಿ. ಇದು ಬಹಳ ಕುತಂತ್ರಿ ಪಕ್ಷ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್
ತೀವ್ರ ವಾಗ್ದಾಳಿ ನಡೆಸಿದರು.
ಟಿಕಮ್ ಗಢದ ಜತಾರಾ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಜಾತಿ ಗಣತಿಗೆ ಬೆಂಬಲ ನೀಡುತ್ತಿದೆ. ಜಾತಿ ಆಧಾರಿತವಾಗಿ ಮತಗಳನ್ನು ಸೆಳೆಯಲು ಅವರು ಮುಂದಾಗಿದ್ದಾರೆ. ಇದರೊಂದಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೂ ಜಾತಿ ಆಧಾರಿತ ಜನಗಣತಿಗೆ ಬೆಂಬಲ ಸೂಚಿಸುತ್ತದೆ. ಬಿಜೆಪಿ ಕೂಡ ಈ ರೀತಿ ಮತದಾರರನ್ನು ಸೆಳೆಯಲು ಮುಂದಾಗಿದೆ ಎಂದರು.
ಮಧ್ಯಪ್ರದೇಶ ಸರ್ಕಾರದ ವಿರುದ್ಧ ಟೀಕಾಸಮರ ನಡೆಸಿದ ಅಖಿಲೇಶ್, ಮಧ್ಯಪ್ರದೇಶದಲ್ಲಿ ಮೂಲಸೌಕರ್ಯಗಳು ಅಭಿವೃದ್ಧಿ ಆಗಿಲ್ಲ. ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಹೇಳಿದರು. ಪ್ರಧಾನಿ ಮೋದಿ ಅವರ ಉಚಿತ ಪಡಿತರ ವಿಚಾರವಾಗಿ ಮಾತನಾಡಿ, ನಿಮಗೆ ಉಚಿತ ಪಡಿತರ ಸಿಗುತ್ತಿಲ್ಲ ಎಂದಾದರೆ ಬಿಜೆಪಿ ಏಕೆ ಮತ ಹಾಕಬೇಕು?. ಬಿಜೆಪಿಯದ್ದು ಲೋಕ ತಾಂತ್ರಿಕ ಸರ್ಕಾರ ಅಲ್ಲ, ಲೂಟ್ ತಾಂತ್ರಿಕ ಸರ್ಕಾರ ಎಂದು ಟೀಕಿಸಿದರು.