ವಿರೋಧ ಪಕ್ಷಗಳನ್ನು ಅಸ್ಥಿರಗೊಳಿಸುವ ಕಾರ್ಯದಲ್ಲಿ ಕಾಂಗ್ರೆಸ್ ತೊಡಗಿದೆ: ಕುಮಾರಸ್ವಾಮಿ ಕಿಡಿ

Prasthutha|

ಮೈಸೂರು: ‘ಕಾಂಗ್ರೆಸ್ ನವರು ಉತ್ತಮವಾಗಿ ಸರ್ಕಾರ ನಡೆಸಿ, ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬದಲಿಗೆ ವಿರೋಧ ಪಕ್ಷಗಳನ್ನು ಅಸ್ಥಿರಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಳ್ಳೆಯ ಕೆಲಸಗಳನ್ನು ಮಾಡಲೆಂದು ಜನರು ಅವರಿಗೆ ಆಶೀರ್ವದಿಸಿದರು. ಆದರೆ, ಈ ಸರ್ಕಾರದವರು ಮಾಡುತ್ತಿರುವುದೇನು? ಆಡಳಿತದ ವಿಷಯದಲ್ಲಿ ರಾಜ್ಯಕ್ಕೆ ಇದ್ದ ಹೆಸರು ಸರ್ವನಾಶಕ್ಕೆ ಹೊರಟಿದ್ದಾರೆ’ ಎಂದು ಆರೋಪಿಸಿದರು.


‘ನಾವೆಲ್ಲರೂ ಒಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಲೇ ಇರುತ್ತಾರೆ. ಯಾರಿಗೋಸ್ಕರ ಒಂದಾಗಿದ್ದಾರೆ? ಅಧಿಕಾರಕ್ಕೆ ಮತ್ತು ಕುರ್ಚಿಗಾಗಿ ಮಾತ್ರವೇ ಒಂದಾಗುತ್ತಿದ್ದಾರೆ. ಕುರ್ಚಿ ಕೊಟ್ಟ ಜನರಿಗಾಗಿ ಏನು ಮಾಡುತ್ತಿದ್ದಾರೆ; ಏನು ಕೊಟ್ಟಿದ್ದಾರೆ?’ ಎಂದು ಕೇಳಿದರು.



Join Whatsapp