ಮಂಗಳೂರು: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ಮನೆಗೆ ಕಲ್ಲು ತೂರಾಟ ಕೃತ್ಯವನ್ನು ಖಂಡಿಸಿ ಅವರ ಮನೆಯಿಂದ ಬಿಜೆಪಿ ಕಚೇರಿಯವರೆಗೆ ಆ.23ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ವಕ್ತಾರ ಎಂ.ಜಿ.ಹೆಗಡೆ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ನೆಲೆ ಕಳೆದುಕೊಂಡಿರುವ ಬಿಜೆಪಿ ಕರ್ನಾಟಕದಲ್ಲಿ ಸರಕಾರ ಅಸ್ಥಿರಗೊಳಿಸಿ ಗ್ಯಾರಂಟಿ ಕಿತ್ತೊಗೆಯುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದರು.
ಶಾಸಕ ವೇದವ್ಯಾಸ ಕಾಮತ್ ಹಿಂದುತ್ವ ಆದಾರದಲ್ಲಿ ಮಾತನಾಡಿದರೆ ಓಟು ಸಿಗುತ್ತದೆ ಅಂದುಕೊಂಡಿದ್ದಾರೆ. ಅದಕ್ಕೆ ಜನ ಸ್ಪಂದನ ಕಡಿಮೆ ಆಗಿದೆ. ಅದಕ್ಕೆ ಈ ಥರದ ವಿಷಯ ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಎಂ.ಜಿ.ಹೆಗಡೆ ಟೀಕಿಸಿದರು.