ಹಣದುಬ್ಬರ ವಿರೋಧಿಸಿ ಡಿ.12 ರಂದು ಕಾಂಗ್ರೆಸ್ ನಿಂದ ರ‍್ಯಾಲಿ

Prasthutha|

ನವದೆಹಲಿ: ಇಂಧನ ಬೆಲೆಯೇರಿಕೆ ಮತ್ತು ಹಣದುಬ್ಬರ ವಿರೋಧಿಸಿ ಡಿಸೆಂಬರ್ 12 ರಂದು ದೆಹಲಿಯಲ್ಲಿ ರ‍್ಯಾಲಿ ನಡೆಸುವುದಾಗಿ ಕಾಂಗ್ರೆಸ್ ಶುಕ್ರವಾರ ತಿಳಿಸಿದೆ. ರ‍್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇನ್ನಿತರ ಕಾಂಗ್ರೆಸ್ ನಾಯಕರು ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ

- Advertisement -

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ಕುರಿತು ಪ್ರತಿಕ್ರಿಯಿಸುತ್ತಾ, ಮೋದಿ ಸರ್ಕಾರ ತನ್ನ ಲೂಟಿಯನ್ನು ಮತ್ತು ಬೆಲೆಯೇರಿಕೆಯ ಹೊರೆಯನ್ನು ನಿಲ್ಲಿಸಲು ಪಕ್ಷ ನಿರ್ಣಾಯಕ ಎಚ್ಚರಿಕೆಯನ್ನು ನೀಡುತ್ತದೆ. ಮೋದಿ ಸರ್ಕಾರ ನಿರ್ಗಮಿಸುವ ತನಕ ನಮ್ಮ ಹೋರಾಟವನ್ನು ಮುಂದುವರಿಸುತ್ತದೆ ಎಂದು ತಿಳಿಸಿದರು.

ಬೆಲೆಯೇರಿಕೆ ಮತ್ತು ಹಣದುಬ್ಬರವು ದೇಶದ ಪ್ರತಿ ಕುಟುಂಬದ ಆದಾಯ, ಕುಟುಂಬದ ಆದಾಯ ಮತ್ತು ದೇಶದ ಬಜೆಟ್ ಅನ್ನು ನಾಶಗೊಳಿಸಿವೆ ಎಂದು ಕಾಂಗ್ರೆಸ್ ತಿಳಿಸಿದೆ.

Join Whatsapp