ಬೆಂಗಳೂರು: ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ತಮ್ಮ ವಿರುದ್ಧ ಪತ್ರಿಕಾಗೋಷ್ಠಿ ನಡೆಸದಂತೆ ಮೈಶೂರು ಸಂಸದ ಪ್ರತಾಪ ಸಿಂಹ ತಂದಿದ್ದ ಮಾಧ್ಯಮ ನಿರ್ಬಂಧಕಾಜ್ಞೆಯನ್ನು ನ್ಯಾಯಾಲಯ ತೆರವುಗೊಳಿಸಿದೆ.
ಪ್ರತಾಪ್ ಸಿಂಹ ಬೆಂಗಳೂರಿನ 9ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಲಕ್ಷ್ಮಣ್ ತಮ್ಮ ವಿರುದ್ಧ ಪತ್ರಿಕಾಗೋಷ್ಠಿ ನಡೆಸದಂತೆ ನಿರ್ಬಂಧಕಾಜ್ಞೆ ತಂದಿದ್ದರು.
ಪ್ರತಾಪ ಸಿಂಹ ಅವರು ಬೆಂಗಳೂರಿನ ವಿಳಾಸ ನೀಡಿ ಮಾಧ್ಯಮ ನಿರ್ಬಂಧಕಾಜ್ಞೆ ತಂದಿದ್ದರು’ ಎಂದು ಲಕ್ಚ್ಮಣ್ ಪರ ವಕೀಲರು ಹೇಳಿದ್ದಾರೆ
ಲಕ್ಷ್ಮಣ್ ಪರವಾಗಿ ವಕೀಲರಾದ ಎಸ್.ಎ.ಅಹಮದ್, ಸೂರ್ಯ ಮುಕುಂದರಾಜ್ ಹಾಗೂ ಸಂಜಯ್ ಯಾದವ್ ವಾದ ಮಂಡಿಸಿದ್ದರು.