ದೆಹಲಿಯ ಸರ್ವಾಧಿಕಾರಿ ಧೋರಣೆಗೆ ಯಡಿಯೂರಪ್ಪ ತಲೆದಂಡ: ಕಾಂಗ್ರೆಸ್

Prasthutha|

ನವದೆಹಲಿ, ಜುಲೈ 26 : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯಡಿಯೂರಪ್ಪನವರ ಕುರಿತು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಈ ಕುರಿತು ಸೋಮವಾರ ದೆಹಲಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, ಬಿಜೆಪಿ ದೆಹಲಿ ನಾಯಕರ ಸರ್ವಾಧಿಕಾರಿ ಮತ್ತು ಬೇಜವಾಬ್ದಾರಿಯುತ ತೀರ್ಮಾನದಿಂದಾಗಿ ಯಡಿಯೂರಪ್ಪ ನವರ ತಲೆದಂಡವಾಗಿದೆ. ಇದು ಬಿಜೆಪಿ ಪಕ್ಷ ಹಿರಿಯ ನಾಯಕರಿಗೆ ನಿವೃತ್ತಿ ನೀಡಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆಯೆಂದು ಆರೋಪಿಸಿದ್ದಾರೆ.

- Advertisement -

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಪಕ್ಷದ ಬದಲು ದೆಹಲಿ ಗದ್ದುಗೆ ತೀರ್ಮಾನಿಸಲಿದೆಯೆಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ ರವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವೆಂದು ಸುರ್ಜೆವಾಲ ಟೀಕಿಸಿದ್ದಾರೆ.



Join Whatsapp