ಕಾಂಗ್ರೆಸ್​ ಗೆ ಬಿಗ್ ಶಾಕ್: ವಕ್ತಾರ ಗೌರವ್ ವಲ್ಲಭ್ ರಾಜೀನಾಮೆ

Prasthutha|

- Advertisement -

ನವದೆಹಲಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್​ ಗೆ ಹೊಡೆದ ಬಿದ್ದಿದೆ, ಕಾಂಗ್ರೆಸ್​ ನ ಹಿರಿಯ ನಾಯಕ, ವಕ್ತಾರ ಗೌರವ್ ವಲ್ಲಭ್ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪಕ್ಷ ತೊರೆದ ಕಾರಣವನ್ನು ಕೂಡ ಬಹಿರಂಗಪಡಿಸಿದ್ದಾರೆ.

- Advertisement -

ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿರುವ ವಲ್ಲಭ್, ‘‘ ನಾನು ಭಾವುಕನಾಗಿದ್ದೇನೆ, ಮನಸ್ಸು ಸಂಕಟಪಡುತ್ತಿದೆ, ನಾನು ಬಹಳಷ್ಟು ಹೇಳಲು, ಬರೆಯಲು ಬಯಸುತ್ತೇನೆ, ಆದರೆ ನನ್ನ ಮಾತುಗಳು ಬೇರೆಯವರಿಗೆ ನೋವುಂಟು ಮಾಡಬಹುದು ಹೀಗಾಗಿ ನನ್ನ ಮಾತುಗಳು ನನ್ನಲ್ಲೇ ಉಳಿಯುತ್ತಿದೆ’’ ಎಂದಿದ್ದಾರೆ.

ಕಾಂಗ್ರೆಸ್​ ಪಕ್ಷದ ಸದಸ್ಯತ್ವವನ್ನು ಪಡೆದ ಬಳಿಕ ಪಕ್ಷವು ಅವರನ್ನು ರಾಷ್ಟ್ರೀಯ ವಕ್ತಾರನನ್ನಾಗಿ ಮಾಡಿತು. ಹಲವು ವಿಷಯಗಳಲ್ಲಿ ಪಕ್ಷದ ನಿಲುವನ್ನು ಜನರ ಮುಂದೆ ಇಡಲಾಯಿತು, ಆದರೆ ಕೆಲವು ದಿನಗಳಿಂದ ಪಕ್ಷದ ನಿಲುವಿನಿಂದ ನನಗೆ ಬೇಸರವಾಗಿದೆ.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಲ್ಲಿ ಕಾಂಗ್ರೆಸ್​ ಪಕ್ಷದ ನಿಲುವಿನಿಂದ ನಾನು ಅಸಮಾಧಾನಗೊಂಡಿದ್ದೇನೆ. ನಾನು ಹುಟ್ಟಿನಿಂದ ಹಿಂದೂ ಮತ್ತು ವೃತ್ತಿಯಲ್ಲಿ ಶಿಕ್ಷಕ. ಪಕ್ಷದ ನಿಲುವು ನನ್ನ ಭಾವನೆಗಳಿಗೆ ಸದಾ ಪೆಟ್ಟು ಕೊಡುತ್ತಿತ್ತು ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ದಾರಿ ತಪ್ಪಿದೆ ಎಂದು ಗೌರವ್ ವಲ್ಲಭ್ ಹೇಳಿದ್ದಾರೆ.



Join Whatsapp