ಉಳ್ಳಾಲ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್’ನ ಶಶಿಕಲಾ, ಉಪಾಧ್ಯಕ್ಷರಾಗಿ ಸ್ವಪ್ನ ಹರೀಶ್ ಆಯ್ಕೆ

Prasthutha|

ಉಳ್ಳಾಲ: ಉಳ್ಳಾಲ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್’ನ ಶಶಿಕಲಾ, ಉಪಾಧ್ಯಕ್ಷರಾಗಿ ಸ್ವಪ್ನ ಹರೀಶ್ ಆಯ್ಕೆಯಾಗಿದ್ದಾರೆ.

- Advertisement -


ಉಳ್ಳಾಲ ನಗರಸಭೆ ಅಧ್ಯಕ್ಷ ಗಾದಿಗೆ ಪರಿಶಿಷ್ಟ ವರ್ಗ ಎಸ್ ಸಿ ಮಹಿಳೆಗೆ ಮೀಸಲಿರಿಸಲಾಗಿತ್ತು. ನಗರಸಭೆ ಅಧ್ಯಕ್ಷೆಯಾಗಿ ಕಾಂಗ್ರೆಸ್ ಅಭ್ಯರ್ಥಿ ಶಶಿಕಲಾ 23 ಮತಗಳ ಸ್ಪಷ್ಟ ಬಹುಮತ ದೊಂದಿಗೆ ಆಯ್ಕೆ ಗೊಂಡರು.


ಕಾಂಗ್ರೆಸ್ ಪಕ್ಷದ 13, ಎಸ್ ಡಿ ಪಿ ಐ ಪಕ್ಷದ 6, ಪಕ್ಷೇತರ 2 ,ಜೆಡಿಎಸ್ ಚುನಾಯಿತರಾಗಿ ಈಗ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಇಬ್ಬರು ಸದಸ್ಯರು ಸೇರಿ ಒಟ್ಟು 23 ಬಹುಮತದಲ್ಲಿ ಶಶಿಕಲಾ ವಿಜೇತರಾದರು.

- Advertisement -


ಬಿಜೆಪಿಯ ಅಧ್ಯಕ್ಷ ಅಭ್ಯರ್ಥಿ ಭವಾನಿ ಯವರಿಗೆ ಅವರ ಪಕ್ಷದ ಕೇವಲ ಆರು ಮತಗಳು ಮಾತ್ರ ಬಿದ್ದು ಸೋಲುಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಕಾಂಗ್ರೆಸ್ ಪಕ್ಷದ ಸಪ್ನಾ ಹರೀಶ್ ರವರು 17 ಮತಗಳನ್ನು ಪಡೆದು ವಿಜೇತರಾದರು.


ಕಾಂಗ್ರೆಸ್ 13 ಜೆಡಿಎಸ್ 2 ಪಕ್ಷೇತರ 2 ಮತಗಳನ್ನು ಪಡೆದರು. ಎಸ್ ಡಿ ಪಿ ಐ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಝರೀನಾ ರಯುಫ್ ರವರು ಕೇವಲ ತಮ್ಮ ಪಕ್ಷದ ಆರು ಸದಸ್ಯರಗಳ ಮತಗಳನ್ನು ಮಾತ್ರ ಪಡೆದರು.



Join Whatsapp