ಪುದು ಗ್ರಾ.ಪಂ. ಕಾಂಗ್ರೆಸ್ ತೆಕ್ಕೆಗೆ:  7 ವಾರ್ಡ್’ಗಳಲ್ಲಿ ಜಯಗಳಿಸುವ ಮೂಲಕ ಯು.ಟಿ.ಖಾದರ್ ಕ್ಷೇತ್ರದಲ್ಲಿ SDPI ಪರಾಕ್ರಮ

Prasthutha|

ಬಂಟ್ವಾಳ: ಇದೇ ತಿಂಗಳ 25ರಂದು ಪುದು ಗ್ರಾಮ ಪಂಚಾಯತ್’ 34 ವಾರ್ಡ್’ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 19 ವಾರ್ಡ್’ಗಳಲ್ಲಿ ಗೆದ್ದು ಅಧಿಕಾರ ಉಳಿಸಿಕೊಂಡಿದೆ. ಅಂತಿಮ ಫಲಿತಾಂಶದ ಬಳಿಕ ಎಸ್’ಡಿಪಿಐ 7 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಸಾಧನೆಗೈದಿದೆ. ಬಿಜೆಪಿ 6 ಸ್ಥಾನಗಳನ್ನು ಪಡೆದು ಯತಾಸ್ಥಿತಿಯನ್ನು ಕಾಪಾಡಿಕೊಂಡಿದೆ. 2 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

- Advertisement -

ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 27, ಬಿಜೆಪಿ 6, ಎಸ್ಡಿಪಿಐ 1 ಸ್ಥಾನವನ್ನು ಗಳಿಸಿತ್ತು.

 2ನೇ ವಾರ್ಡ್’ನಲ್ಲಿ ಎಸ್’ಡಿಪಿಐ ಬೆಂಬಲಿತ ಅಭ್ಯರ್ಥಿ ಮುಹಮ್ಮದ್ ಶಾಫಿ 444 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಕುಂಪನಮಜಲ್ ವಾರ್ಡ್ ನಂಬರ್ ಒಂದರಲ್ಲಿ  ಎಸ್ ಡಿ ಪಿ ಐ ಬೆಂಬಲಿತ ಖೈರುನ್ನಿಸಾ 477, ನವೀನ್ ಸಾಲ್ದಾನ 436, ರುಕ್ಸಾನಾ ಸಲಾಂ 479 ಮತಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.

- Advertisement -

 ಅಮೆಮಾರ್ ಮೂರನೇ ವಾರ್ಡ್’ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಅಬ್ದುಲ್ ರಝಾಕ್, ಮುಹಮ್ಮದ್ ಅನಸ್, ನೆಬಿಸ, ರುಕ್ಸನಾ ಹಾಗೂ ನೆಬಿಸ ಬಾನು ಜಯಗಳಿಸಿದ್ದಾರೆ. ಪೇರಿಮಾರ್ ವಾರ್ಡ್ ನಂಬರ್ 6ರಲ್ಲಿ ಕಾಂಗ್ರೆಸ್’ನ ಹಾಶೀರ್ 631 ಮತಗಳಿಂದ ಜಯಗಳಿಸಿದ್ದಾರೆ.

Join Whatsapp