ಬಂಟ್ವಾಳ: ಇದೇ ತಿಂಗಳ 25ರಂದು ಪುದು ಗ್ರಾಮ ಪಂಚಾಯತ್’ 34 ವಾರ್ಡ್’ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 19 ವಾರ್ಡ್’ಗಳಲ್ಲಿ ಗೆದ್ದು ಅಧಿಕಾರ ಉಳಿಸಿಕೊಂಡಿದೆ. ಅಂತಿಮ ಫಲಿತಾಂಶದ ಬಳಿಕ ಎಸ್’ಡಿಪಿಐ 7 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಸಾಧನೆಗೈದಿದೆ. ಬಿಜೆಪಿ 6 ಸ್ಥಾನಗಳನ್ನು ಪಡೆದು ಯತಾಸ್ಥಿತಿಯನ್ನು ಕಾಪಾಡಿಕೊಂಡಿದೆ. 2 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 27, ಬಿಜೆಪಿ 6, ಎಸ್ಡಿಪಿಐ 1 ಸ್ಥಾನವನ್ನು ಗಳಿಸಿತ್ತು.
2ನೇ ವಾರ್ಡ್’ನಲ್ಲಿ ಎಸ್’ಡಿಪಿಐ ಬೆಂಬಲಿತ ಅಭ್ಯರ್ಥಿ ಮುಹಮ್ಮದ್ ಶಾಫಿ 444 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಕುಂಪನಮಜಲ್ ವಾರ್ಡ್ ನಂಬರ್ ಒಂದರಲ್ಲಿ ಎಸ್ ಡಿ ಪಿ ಐ ಬೆಂಬಲಿತ ಖೈರುನ್ನಿಸಾ 477, ನವೀನ್ ಸಾಲ್ದಾನ 436, ರುಕ್ಸಾನಾ ಸಲಾಂ 479 ಮತಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.
ಅಮೆಮಾರ್ ಮೂರನೇ ವಾರ್ಡ್’ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಅಬ್ದುಲ್ ರಝಾಕ್, ಮುಹಮ್ಮದ್ ಅನಸ್, ನೆಬಿಸ, ರುಕ್ಸನಾ ಹಾಗೂ ನೆಬಿಸ ಬಾನು ಜಯಗಳಿಸಿದ್ದಾರೆ. ಪೇರಿಮಾರ್ ವಾರ್ಡ್ ನಂಬರ್ 6ರಲ್ಲಿ ಕಾಂಗ್ರೆಸ್’ನ ಹಾಶೀರ್ 631 ಮತಗಳಿಂದ ಜಯಗಳಿಸಿದ್ದಾರೆ.