►‘ರಾಮಮಂದಿರ ಉದ್ಘಾಟನೆ RSS, BJP ಕಾರ್ಯಕ್ರಮ’
ಬೆಂಗಳೂರು: ಅಯೋಧ್ಯೆಯಲ್ಲಿ ನಡೆಯುವ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಗೌರವಯುತವಾಗಿ ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ರಾಮ ಮಂದಿರ ಉದ್ಘಾಟನೆಯನ್ನು ಬಿಜೆಪಿ-ಆರ್ ಎಸ್ ಎಸ್ ಕಾರ್ಯಕ್ರಮ ಎಂದು ಕರೆದಿರುವ ಪಕ್ಷವು, ಧರ್ಮವು ವೈಯಕ್ತಿಕ ವಿಷಯ. ಆರೆಸ್ಸೆಸ್ – ಬಿಜೆಪಿ ಅಯೋಧ್ಯೆ ಮಂದಿರವನ್ನು ರಾಜಕೀಯ ಯೋಜನೆಯಾಗಿ ಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ