ಆರ್ ಆರ್ ಟಿಎಸ್ ರೈಲುಗಳಿಗೆ ‘ನಮೋ ಭಾರತ್’ ಹೆಸರು: ಕಾಂಗ್ರೆಸ್ ಆಕ್ಷೇಪ

Prasthutha|

ನವದೆಹಲಿ: ಆರ್ ಆರ್ ಟಿಎಸ್ ವ್ಯವಸ್ಥೆಯ ರೈಲುಗಳಿಗೆ ‘ನಮೋ ಭಾರತ್’ ರೈಲು ಎಂದು ನಾಮಕರಣ ಮಾಡಿರುವುದನ್ನು ಕಾಂಗ್ರೆಸ್ ಟೀಕಿಸಿದೆ.

- Advertisement -


‘ನಮೋ ಸ್ಟೇಡಿಯಂ ನಂತರ ಈಗ ನಮೋ ರೈಲುಗಳು. ಅವರ ಸ್ವಯಂ ಗೀಳಿಗೆ ಮಿತಿ ಎಂಬುದೇ ಇಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
‘ಭಾರತ ಅಂತಾದರೂ ಯಾಕೆ ಕರೆಯಬೇಕು? ದೇಶದ ಹೆಸರನ್ನು ನಮೋ ಎಂದು ಬದಲಾಯಿಸಿ ಅಷ್ಟೆ’ ಎಂದು ಪವನ್ ಖೇರಾ ಟೀಕಿಸಿದ್ದಾರೆ.