ಬಿಜೆಪಿ ಗಾಳಕ್ಕೆ 50 ಅಲ್ಲ 100 ಕೋಟಿ ಕೊಟ್ಟರೂ ಕಾಂಗ್ರೆಸ್ ಶಾಸಕರು ಬೀಳಲ್ಲ: ಗಣಿಗ ರವಿ

Prasthutha|

ಮಂಡ್ಯ: ಬಿಜೆಪಿ ಗಾಳಕ್ಕೆ 50 ಅಲ್ಲ 100 ಕೋಟಿ ಕೊಟ್ಟರೂ ಕಾಂಗ್ರೆಸ್ ಶಾಸಕರು ಬೀಳಲ್ಲ ಎಂದು ಶಾಸಕ ಗಣಿಗ ರವಿ ಸ್ಪಷ್ಟನೆ ನೀಡಿದರು.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನದ ಬಳಿಕ ನಾನು ಸಿಎಂ, ಡಿಸಿಎಂ ಜೊತೆ ಮಾತನಾಡಿ ಮಾಧ್ಯಮದ ಮುಂದೆ ಬರುತ್ತೇನೆ. ಎಲ್ಲಿ ಏನು ಮಾತನಾಡಿದ್ದಾರೆ ಎಂಬ ಸಾಕ್ಷಿಯನ್ನು ಅತೀ ಶ್ರೀಘ್ರದಲ್ಲಿ ಬಿಡುತ್ತೇವೆ. ಕರ್ನಾಟಕದ ಎಲ್ಲಾ ಕಡೆ ಬಲೆ ಹಾಕಲು ಹೊರಟಿದ್ದಾರೆ. ಸದ್ಯಕ್ಕೆ ಐದು ಜನಕ್ಕೆ ಆಫರ್ ಬಂದಿದೆ. ಒಬ್ಬರ ಮುಂದೆ ಕೂತು ಇನ್ನೊಬ್ಬರಿಗೆ ಸ್ಪೀಕರ್ ಹಾಕಿ ಮಾತನಾಡಿದ್ದಾರೆ. ಯಾರಿಗೆ ಆಫರ್ ಕೊಟ್ಟಿದ್ದಾರೋ ಆ ಶಾಸಕರ ಜೊತೆ ಮಾಧ್ಯಮದ ಮುಂದೆ ಬರುತ್ತೇವೆ ಎಂದರು.

ಸರ್ಕಾರ ಕೆಡವಲು ನಮ್ಮ ಶಾಸಕರ ಬಳಿ ಮಾತನಾಡಿ 50 ಕೋಟಿ ಆಫರ್ ನೀಡಿ ಬಿಜೆಪಿಗೆ ಬಂದರೆ ಮಂತ್ರಿಗಿರಿ ಕೊಡ್ತೀವಿ ಎಂದು ಹೇಳಿದ್ದಾರೆ. ಹಳೆ ಮೈಸೂರು ಭಾಗದ ಒಬ್ಬ ಎಂಎಲ್ ಸಿ, ಬೆಳಗಾವಿಯ ಮಾಜಿ ಸಚಿವ ಸಂತೋಷ್, ಗೋಲ್ಡ್ ಫಿಂಚ್ ನಲ್ಲಿ ನಮ್ಮ ಶಾಸಕರನ್ನು ಮೀಟ್ ಮಾಡಿದ್ದಾರೆ. ಎರಡು ದಿನದ ಬಳಿಕ ನಾನು ಸಿಎಂ, ಡಿಸಿಎಂ ಜೊತೆ ಮಾತನಾಡಿ ಮಾಧ್ಯಮದ ಮುಂದೆ ಬರುತ್ತೇನೆ ಎಂದು ಹೇಳಿದ್ದಾರೆ.

Join Whatsapp