ಕಾಂಗ್ರೆಸ್ ನಲ್ಲಿ ಸಚಿವರ ವಿರುದ್ಧ ಶಾಸಕರ ಅಸಮಾಧಾನ: ಸಿಎಂ, ಡಿಸಿಎಂ ಹೇಳಿದ್ದೇನು?

Prasthutha|

ಬೆಂಗಳೂರು: ಸಚಿವರ ನಡೆಯಿಂದ ಅಸಮಾಧಾನಗೊಂಡಿರುವ 20ಕ್ಕೂ ಹೆಚ್ಚು ಶಾಸಕರು ಸಿಎಂ ಸಿದ್ದರಾಮಯ್ಯಗೆ ದೂರು ನೀಡಿದ್ದಾರೆ. ಅಲ್ಲದೇ ಶಾಸಕಾಂಗ ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ.

- Advertisement -


ಇನ್ನು ಈ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಶಾಸಕರು ದೂರು ಕೊಟ್ಟಿಲ್ಲ. ಶಾಸಕಾಂಗ ಸಭೆ ಕರೆಯಿರಿ ಎಂದಿದ್ದಾರೆ. ಹೀಗಾಗಿ ಗುರುವಾರ(ಜುಲೈ 27) ಶಾಸಕಾಂಗ ಸಭೆ ಕರೆದಿದ್ದೇವೆ. ಕಳೆದ ವಾರ ಶಾಸಕಾಂಗ ಸಭೆ ಆಗಬೇಕಿತ್ತು. ರಾಹುಲ್ ಗಾಂಧಿ ಬರುತ್ತಿದ್ದ ಕಾರಣ ಶಾಸಕಾಂಗ ಸಭೆ ಕರೆದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.


ಇನ್ನು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಎಲ್ಲಾ ಊಹಾಪೋಹ, ಯಾವುದೇ ಪತ್ರ ಬರೆದಿಲ್ಲ. ಶಾಸಕರು ಅವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಸುಮ್ಮನೆ ಊಹಾಪೋಹದ ಸುದ್ದಿ ಹಬ್ಬಿಸಲಾಗಿದೆ. ನಮ್ಮ 5 ಕಾರ್ಯಕ್ರಮ ಇದಾವೆ ಜನರಿಗೆ ಯಾವ ರೀತಿ ತಲುಪುತ್ತಿದ್ದೇವೆ. ಭ್ರಷ್ಟಾಚಾರ ಏನಾದರೂ ನಡೆಯುತ್ತಿದೆಯಾ? ನಮ್ಮ ಶಾಸಕರಿಗೆ ಗೈಡ್ ಲೈನ್ಸ್ ಕೊಡಬೇಕು. ಮಾಹಿತಿ ಕೊಡಬೇಕು, ಪ್ರತಿ ಗ್ರಾಮ ಪಂಚಾಯತಿಯಲ್ಲಿ ನಮ್ಮ ಕಾರ್ಯಕ್ರಮ ಜನರಿಗೆ ತಲುಪಬೇಕು. ಎಲ್ಲ ಸಚಿವರೂ ಮಾತು ಕೇಳುತ್ತಿದ್ದಾರೆ, ಎಲ್ಲರೂ ಅವರವರ ಕೆಲಸ ಮಾಡುತ್ತಿದ್ದಾರೆ. ಯಾವುದೇ ಅಸಮಾಧಾನ ಇಲ್ಲ, ವರ್ಗಾವಣೆ ಅವಧಿ ಮುಗಿದಿದೆ ಎಂದು ಹೇಳಿದರು.



Join Whatsapp