ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶಿಕಾರಿಪುರದ ಅನಭಿಷಿಕ್ತ ದೊರೆ ಎಂದು ಕಾಂಗ್ರೆಸ್ ಶಾಸಕ ತಮ್ಮಯ್ಯ ಕರೆದಿದ್ದಾರೆ.
ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಉರ್ದು ಸಮ್ಮೇಳನದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಕುರಿತು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಯಡಿಯೂರಪ್ಪ ಅವರು ಎಂದಿಗೂ ಯಾವ ಧರ್ಮವನ್ನ ವಿರೋಧಿಸಲಿಲ್ಲ. ದೇಶದಲ್ಲಿ ಮುಸ್ಲಿಮರು ಸಾರಾಸಗಟಾಗಿ ಬಿಜೆಪಿಗೆ ಮತ ಹಾಕುರುವುದು ಶಿಕಾರಿಪುರದಲ್ಲಿ ಮಾತ್ರ. ಅವರು ಕೆಜೆಪಿ ಕಟ್ಟಿದಾಗ ಮಸೀದಿಯಲ್ಲಿ ಟೋಪಿ ಹಾಕಿದರು. ಆ ಫೋಟೋ ಹಾಕಿ ತುಂಬಾ ಕಿಂಡಲ್ ಮಾಡಿದರು. ವ್ಯಕ್ತಿ ತನ್ನ ಧರ್ಮದ ಜೊತೆ ಎಲ್ಲಾ ಧರ್ಮವನ್ನ ಪ್ರೀತಿಸಬೇಕು. ಆತನನ್ನ ಎಲ್ಲಾ ಸಂದರರ್ಭದಲ್ಲೂ ಎಲ್ಲರೂ ಒಪ್ಪುತ್ತಾರೆ ಎಂದರು.