ಪಕ್ಷದ ನಿರ್ಧಾರವನ್ನು ಧಿಕ್ಕರಿಸಿ ದ್ರೌಪದಿ ಮುರ್ಮು ಪರ ಮತ ಚಲಾಯಿಸಿದ ಕಾಂಗ್ರೆಸ್ ಶಾಸಕ ಮುಹಮ್ಮದ್ ಮೊಕ್ವಿಮ್

Prasthutha|

ನವದೆಹಲಿ: ಪಕ್ಷದ ನಿರ್ಧಾರವನ್ನು ಧಿಕ್ಕರಿಸಿ ಕಟಕ್-ಬಾರಾಬತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುಹಮ್ಮದ್ ಮೊಕ್ವಿಮ್ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಪರ ಮತ ಚಲಾಯಿಸಿದ್ದಾರೆ.

- Advertisement -

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ಆತ್ಮಸಾಕ್ಷಿಯ ಆದೇಶದಂತೆ ಮತ ಚಲಾಯಿಸಿದ್ದೇನೆ ಮತ್ತು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ನನ್ನ ರಾಜ್ಯದ ಮಗಳನ್ನು ಆಯ್ಕೆ ಮಾಡಿದ್ದೇನೆ ಎಂದು ತಿಳಿಸಿದರು.

ಒಡಿಶಾದ ಜನ ನನ್ನ ನಿರ್ಧಾರವನ್ನು ಬೆಂಬಲಿಸುತ್ತಾರೆ, ನನ್ನ ಮತದಿಂದ ದ್ರೌಪದಿ ಮುರ್ಮು ಅವರ ಗೆಲುವಿನ ಅಂತರ ಹೆಚ್ಚಾದರೆ ನಾನು ಹೆಮ್ಮೆ ಪಡುತ್ತೇನೆ. ಇದು ವೈಯಕ್ತಿಕ ನಿರ್ಧಾರ. ನನ್ನ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಹೇಳಿದರು. ದೇಶದ ಒಳಗೆ ಮತ್ತು ಹೊರಗಿನಿಂದ ಹಲವಾರು ಗಣ್ಯ ವ್ಯಕ್ತಿಗಳು ದ್ರೌಪದಿ ಮುರ್ಮುಗೆ ಮತ ಹಾಕುವಂತೆ ತನಗೆ ಮನವಿ ಮಾಡಿದ್ದರು ಎಂದೂ ಕೈ ಶಾಸಕ ಹೇಳಿದ್ದಾರೆ.

- Advertisement -

ಮುಹಮ್ಮದ್ ಮೊಕ್ವಿಮ್ ನಡೆಯಿಂದ ರಾಜ್ಯ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶರತ್ ಪಟ್ಟನಾಯಕ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ನರಸಿಂಗ್ ಮಿಶ್ರಾ, ಈ ಬಗ್ಗೆ ಹೈಕಮಾಂಡ್ ಗೆ ವರದಿ ಮಾಡಿರುವುದಾಗಿ ತಿಳಿಸಿದ್ದಾರೆ.



Join Whatsapp