ಅಮೃತಸರ: ಕಾಂಗ್ರೆಸ್ ನಾಯಕನನ್ನು ಮಹಿಳೆಯೊಬ್ಬಳು ಸೋಮವಾರ ಇಲ್ಲಿ ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದಿದೆ.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿದ್ದ ಮೇಜರ್ ಸಿಂಗ್ ಧಲಿವಾಲ್ ಹತ್ಯೆಯಾದ ಕಾಂಗ್ರೆಸ್ ನಾಯಕರಾಗಿದ್ದಾರೆ.
ಆರೋಪಿ ಮಹಿಳೆ ಧಲಿವಾಲ್ ಅವರೊಂದಿಗೆ ಸಂಬಂಧ ಹೊಂದಿದ್ದು, ಕೆಲವು ವೈಯಕ್ತಿಕ ಕಾರಣಗಳಿಂದ ಅವರನ್ನು ಹತ್ಯೆಗೈದಿದ್ದಾಳೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತರ್ನ್ ತರಣ್ ಮಾಹಿತಿ ನೀಡಿದ್ದಾರೆ.
ಗಡಿಭಾಗದಲ್ಲಿರುವ ಸಾಂಗ್ವಾ ಗ್ರಾಮದಲ್ಲಿ ಧಲಿವಾಲ್ ಅವರ ಮಾಲಕತ್ವದ ಅರಮನೆಯ ಬಳಿ ಮಹಿಳೆ ಹಲವು ಬಾರಿ ಗುಂಡು ಹಾರಿಸಿದ್ದಾಳೆ. ಎರಡು ಗುಂಡುಗಳು ತಗುಲಿ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.