ಮಧ್ಯರಾತ್ರಿ ಫಡ್ನವೀಸ್ ಭೇಟಿಯಾದ ಕಾಂಗ್ರೆಸ್ ನಾಯಕ!

Prasthutha|

ಗೋವಾದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ

- Advertisement -

ಪಣಜಿ: ಗೋವಾದ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಅವರು ವಾಸ್ತವ್ಯವಿದ್ದ ಹೋಟೆಲ್ ಗೆ ಗೋವಾ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷರು ಸೋಮವಾರ ಮಧ್ಯರಾತ್ರಿ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಗೋವಾ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆದಿರುವ ಹೊತ್ತಿನಲ್ಲಿಯೇ ಕಾರ್ಯಾಧ್ಯಕ್ಷ ಅಲೆಕ್ಸೊ ರೆಜಿನಾಲ್ಡೊ ಲೊರೆಂಕೊ ಅವರು ಭೇಟಿ ನೀಡಿದ್ದಾರೆ. ಹೋಟೆಲ್ ಬಳಿ ಈ ಭೇಟಿಯ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಅವರು ಉತ್ತರಿಸಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

- Advertisement -

ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ಲೊರೆಂಕೊ ಅವರು, ‘ಚುನಾವಣಾ ಕಾರ್ಯತಂತ್ರ ಕುರಿತ ಸಭೆಗಾಗಿ ಆ ಹೋಟೆಲ್ ಗೆ ತೆರಳಿದ್ದೆ. ಆದರೆ, ಅದೇ ಹೋಟೆಲ್ ನಲ್ಲಿ ಬಿಜೆಪಿ ಮುಖಂಡರು ಇರುವುದು ತಿಳಿದ ಕೂಡಲೇ ನಿರ್ಗಮಿಸಿದ್ದೆ’ ಎಂದು ಹೇಳಿದ್ದಾರೆ.

Join Whatsapp