ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಮಧ್ಯಂತರ ಜಾಮೀನು ಮಂಜೂರು

Prasthutha|

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹೇಳಿಕೆ ನೀಡಿರುವುದಕ್ಕೆ ಬಂಧಿಸಲ್ಪಟ್ಟಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

- Advertisement -

ಅಲ್ಲದೆ, ಎಲ್ಲ ಎಫ್ ಐಆರ್ ಗಳನ್ನು ಒಂದೇ ವ್ಯಾಪ್ತಿಗೆ ತರುವಂತೆ ನೋಟಿಸ್ ನೀಡಿದೆ.
ಪವನ್ ಖೇರಾ ಅವರನ್ನು ರಾಯ್ ಪುರಕ್ಕೆ ತೆರಳಬೇಕಿದ್ದ ವಿಮಾನದಿಂದ ಕೆಳಗಿಳಿಸಿದ ನಂತರ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಖೇರಾ ವಿರುದ್ಧ ಅಸ್ಸಾಂನಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ವಿಮಾನದಿಂದ ಕೆಳಗಿಳಿಸುವಂತೆ ದೆಹಲಿ ಪೊಲೀಸರು ಕೇಳಿದ್ದರು.


ಅರೆಸ್ಟ್ ವಾರೆಂಟ್ ಇಲ್ಲದೇ ಅವರನ್ನು ಕರೆದುಕೊಂಡು ಹೋಗಲು ಬಿಡದೆ ಪ್ರತಿಭಟಿಸಿ ಕಾಂಗ್ರೆಸ್ ಮುಖಂಡರು ಧರಣಿ ಕುಳಿತಿದ್ದರು. ಆದರೆ ಸುಪ್ರೀಂ ಕೋರ್ಟ್ ಪವನ್ ಖೇರಾ ಅವರಿಗೆ ಮಧ್ಯಂತರ ಜಾಮೀನು ನೀಡಿದೆ.



Join Whatsapp