ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ವಶಕ್ಕೆ: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

Prasthutha|

ನವದೆಹಲಿ: ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ದಿಲ್ಲಿಯಿಂದ ಛತ್ತೀಸ್’ಗಡದ ರಾಜಧಾನಿ ರಾಯಿಪುರಕ್ಕೆ ತೆರಳುತ್ತಿದ್ದಾಗ ಅವರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆ ಒಡ್ಡಲಾಗಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

- Advertisement -


ಕೂಡಲೆ ಕಾಂಗ್ರೆಸ್ ನಾಯಕರು ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಿದರು. ಪವನ್ ಖೇರಾ ಅವರನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲು ಪ್ರಯತ್ನಿಸಲಾಗಿದೆ. ನಾವು ಅಲ್ಲೇ ಪ್ರತಿಭಟನೆ ನಡೆಸಿದೆವು ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ.

  ಅಸ್ಸಾಂ ಪೊಲೀಸರು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾರನ್ನು ಬಂಧಿಸಿದರು.  

- Advertisement -

 ಅಸ್ಸಾಂ ಪೊಲೀಸರು ಖೇರಾ ಅವರನ್ನು ಪೊಲೀಸ್ ವಾಹನಕ್ಕೆ ಒಯ್ಯುತ್ತಿರುವ ವೀಡಿಯೋ ಬಿಡುಗಡೆ ಮಾಡಲಾಗಿದೆ.

 ಆಗ ಪತ್ರಕರ್ತರೊಡನೆ ಮಾತನಾಡಿದ ಖೇರಾ ಅವರು, ಯಾಕೆ ಬಂಧಿಸಿದ್ದಾರೋ, ಏನೇ ಕಾರಣವಿದ್ದರೂ ನಾನು ಹೋರಾಡುತ್ತೇನೆ ಎಂದು ತಿಳಿಸಿದರು.

ಅಸ್ಸಾಂ ದಿಮಾ ಹಸಾವೊ ಜಿಲ್ಲೆಯ ಹಾಫ್ಲಾಂಗ್ ಪೊಲೀಸ್ ಠಾಣೆಯಲ್ಲಿ ಖೇರಾ ವಿರುದ್ಧ ಮೊಕದ್ದಮೆ ದಾಖಲಾಗಿದೆ ಎಂದು ಅಸ್ಸಾಂ   ಐಜಿಪಿ ಪ್ರಸಾಂತ ಕುಮಾರ್ ಬುಯಾನ್ ಹೇಳಿದ್ದಾರೆ.

ಇಂದು ದಿಲ್ಲಿ ಕೋರ್ಟಿನಲ್ಲಿ ಹಾಜರುಪಡಿಸಿ ಅಸ್ಸಾಮಿಗೆ ಒಯ್ಯುವುದಾಗಿ ಅವರು ತಿಳಿಸಿದ್ದಾರೆ.


ನಮಗೆ ಪವನ್ ಖೇರಾರನ್ನು ರಾಯಿಪುರಕ್ಕೆ ಹೋಗಗೊಡದಂತೆ ತಡೆಯಬೇಕು ಎಂದು ಸೂಚನೆ ನೀಡಲಾಗಿತ್ತು ಎಂದು ಇಂಡಿಗೋ ಏರ್ ಲೈನ್ಸ್ ನವರು ತಿಳಿಸಿದ್ದಾರೆ.
ನರೇಂದ್ರ ಮೋದಿಯವರನ್ನು ಅವಮಾನ ಮಾಡಿದ್ದಕ್ಕಾಗಿ ಕೂಡಲೆ ಪವನ್ ಖೇರಾರನ್ನು ಬಂಧಿಸಬೇಕು ಎಂದು ಬಿಜೆಪಿಯವರು ಒತ್ತಾಯಿಸಿದ್ದರು. ಇತ್ತೀಚೆಗೆ ಒಂದು ಪತ್ರಿಕಾಗೋಷ್ಠಿಯಲ್ಲಿ ಪವನ್ ಖೇರಾ “ನರಸಿಂಹರಾಯರು ತನಿಖೆಗೆ ಸರ್ವ ಪಕ್ಷ ಸಂಸದೀಯ ಜಂಟಿ ಸಮಿತಿ (ಜೆಪಿಸಿ) ರಚಿಸಬಲ್ಲರು, ಅಟಲ್ ಬಿಹಾರಿ ವಾಜಪೇಯಿಯವರು ಜೆಪಿಸಿ ರಚಿಸಬಲ್ಲರು, ಇನ್ನು ಈ ನರೇಂದ್ರ ಗೌತಮ ದಾಸ್ ಕ್ಷಮಿಸಿ, ದಾಮೋದರ ದಾಸ್ ಮೋದಿಯವರಿಗೆ ಏಕೆ ಆಗುವುದಿಲ್ಲ?” ಎಂದು ಪ್ರಶ್ನಿಸಿದ್ದರು.

Join Whatsapp