ಮೋದಿ ಸರ್ಕಾರದ ‘ಅಗ್ನಿಪಥ’ ಯೋಜನೆಗೆ ಬೆಂಬಲ ಸೂಚಿಸಿದ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ

Prasthutha|

ನವದೆಹಲಿ: ಸೇನಾ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಗೆ ಉದ್ಯೋಗಾಕಾಂಕ್ಷಿಗಳು ದೇಶದ್ಯಾಂತ ಆಕ್ರೋಶ ವ್ಯಕ್ತಪಡಿಸಿರುವ ಮಧ್ಯೆ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಮನೀಶ್ ಅವರು ಅಗ್ನಿಪಥಕ್ಕೆ ಬೆಂಬಲ ಸೂಚಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, ಅಗ್ನಿಪಥ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಆತಂಕಗೊಂಡಿರುವ ಯುವ ಸಮುದಾಯದ ವಿಚಾರದಲ್ಲಿ ನಾನು ಸಹಾನುಭೂತಿ ಹೊಂದಿದ್ದೇನೆ. ವಾಸ್ತವವೇನೆಂದರೆ ತಂತ್ರಜ್ಞಾನ, ಆಯುಧಗಳ ಅರಿವಿರುವ ಯುವ ಸಶಸ್ತ್ರ ಪಡೆಯ ಅಗತ್ಯ ಭಾರತಕ್ಕೆ ಇದೆ. ದೇಶದ ಸಶಸ್ತ್ರ ಪಡೆಗಳು ಉದ್ಯೋಗ ಖಾತರಿ ಕಾರ್ಯಕ್ರಮವಾಗಬಾರದು’ ಎಂದು ಹೇಳಿದ್ದಾರೆ.
ಕೇಂದ್ರದ ಯೋಜನೆಯನ್ನು ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿದ್ದು, ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ.

ಈ ಹಿಂದೆ ಹಿರಿಯ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಅಗ್ನಿಪಥಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮೋದಿ ಅವರು ನಿರುದ್ಯೋಗಿ ಯುವಕರ ಸಮಸ್ಯೆಯನ್ನು ಆಳಿಸಬೇಕು. ಅಗ್ನಿಪಥವನ್ನು ಜಾರಿಗೆ ತಂಡು ಅವರ ತಾಳ್ಮೆಯನ್ನು ಅಗ್ನಿ ಪರೀಕ್ಷೆಗೆ ಒಳಪಡಿಸಬಾರದು ಎಂದು ತಿಳಿಸಿದ್ದಾರೆ.

- Advertisement -

ಅಲ್ಲದೆ ಬಿಜೆಪಿಯ ಮಿತ್ರ ಪಕ್ಷವಾದ ಜೆಡಿಯು ಪಕ್ಷ ಅಗ್ನಿಪಥವನ್ನು ವಿರೋಧಿಸಿದೆ.



Join Whatsapp