►ದಲಿತರು, ಮುಸ್ಲಿಮರಿಗಾಗಿ ಏನನ್ನೂ ಮಾಡಿಲ್ಲ
ಲಖನೌ: ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಕ್ಷವು ಸಮಾನ ಮನಸ್ಕ ಜಾತಿವಾದಿ ಮತ್ತು ಬಂಡವಾಳಶಾಹಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆ. ಬಿಜೆಪಿ ಕೂಡ ಎನ್ ಡಿಎಯನ್ನು ಬಲಪಡಿಸುತ್ತಿದೆ. ಆದರೆ, ಅವರ ನೀತಿಗಳು ದಲಿತ ಮತ್ತು ಮುಸ್ಲಿಂ ವಿರೋಧಿ’ ಎಂದು ಬಿಎಸ್ ಪಿ ವರಿಷ್ಠೆ ಮಾಯಾವತಿ ಆರೋಪಿಸಿದ್ದಾರೆ.
ಈ ಪಕ್ಷಗಳು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವುದಿಲ್ಲ. ಅವರು ದಲಿತರು, ಮುಸ್ಲಿಮರು ಮತ್ತು ಅಲ್ಪಸಂಖ್ಯಾತರಿಗಾಗಿ ಏನನ್ನೂ ಮಾಡಿಲ್ಲ. ಕಾಂಗ್ರೆಸ್ ಇರಲಿ ಅಥವಾ ಬಿಜೆಪಿ ಇರಲಿ. ಅವರೆಲ್ಲರೂ ಒಂದೇ. ಅಧಿಕಾರಕ್ಕೆ ಬಂದ ಮೇಲೆ ಭರವಸೆಗಳನ್ನು ಮರೆತುಬಿಡುತ್ತಾರೆ. ಜನತೆಗೆ ನೀಡಿದ ಒಂದೇ ಒಂದು ಭರವಸೆಯನ್ನೂ ಅವರು ಈಡೇರಿಸಿಲ್ಲ. ಬಿಎಸ್ ಪಿ ಈ ವಿಪಕ್ಷಗಳೊಂದಿಗೆ ಕೈಜೋಡಿಸದಿರಲು ಇದೇ ದೊಡ್ಡ ಕಾರಣ ಎಂದು ಮಾಯಾವತಿ ಹೇಳಿದ್ದಾರೆ.
#WATCH | BSP chief Mayawati says, "Congress party is forging alliance with like-minded casteist and capitalist parties to come into power. BJP is also strengthening NDA…But their policies are anti-Dalit and anti-Muslim." pic.twitter.com/xSvuwkPi6f
— ANI UP/Uttarakhand (@ANINewsUP) July 19, 2023