ಬೆಲೆ ಏರಿಕೆ ಪ್ರತಿಭಟನೆಯನ್ನು ಧರ್ಮನಿಂದನೆಯಾಗಿ ತಿರುಚಿದ ಶಾ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

Prasthutha|

ನವದೆಹಲಿ: ಬೆಲೆ ಏರಿಕೆ ಪ್ರತಿಭಟನೆಯನ್ನು ಧರ್ಮನಿಂದನೆಯಾಗಿ ತಿರುಚಿದ ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ತಿರುಗೇಟು ನೀಡಿದ್ದು, ‘ಇದು ರೋಗಗ್ರಸ್ಥ ಮನಸ್ಥಿತಿ’ ಎಂದು ಅವರು ಕಿಡಿ ಕಾರಿದ್ದಾರೆ.

- Advertisement -

ಕಾಂಗ್ರೆಸ್ ನ ಪ್ರತಿಭಟನೆಯನ್ನು ಖಂಡಿಸಿದ್ದ ಗೃಹ ಸಚಿವ ಅಮಿತ್ ಶಾ, ‘ಪ್ರಧಾನಿ ನರೇಂದ್ರ ಮೋದಿ ಅವರು ಇದೇ ದಿನ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಅದೇ ದಿನವನ್ನು ಆಯ್ಕೆ ಮಾಡಿಕೊಂಡಿದೆ. ಆ ಮೂಲಕ ಒಂದು ಧರ್ಮದವರನ್ನು ಓಲೈಸುತ್ತಿದೆ. ಇದರಿಂದ ಶ್ರೀ ರಾಮನಿಗೆ ಅವಮಾನವಾಗಿದೆ’ ಎಂದು ಆರೋಪಿಸಿದ್ದರು.


ಅಮಿತ್ ಶಾ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟೀಕಿಸಿದ್ದು, ಬೆಲೆ ಏರಿಕೆ, ನಿರುದ್ಯೋಗ ಮತ್ತು ಜಿಎಸ್ ಟಿ ವಿರುದ್ಧ ಕಾಂಗ್ರೆಸ್ ನ ಇಂದಿನ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ತಿರುಚಿ, ಧ್ರುವೀಕರಿಸುವ ಮತ್ತು ದುರುದ್ದೇಶಪೂರಿತ ಆಯಾಮ ನೀಡುವ ಹತಾಶ ಪ್ರಯತ್ನವನ್ನು ಗೃಹ ಸಚಿವರು ಮಾಡಿದ್ದಾರೆ. ಇದು ರೋಗಗ್ರಸ್ಥ ಮನಸ್ಥಿತಿ. ನಮ್ಮ ಹೋರಾಟವು ಅಮಿತ್ ಶಾ ಅವರಿಗೆ ನಿಜಯವಾಗಿಯೂ ತಟ್ಟಿದೆ’ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

Join Whatsapp