ಗುಜರಾತ್‌ನಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಗೂ ಟಿಕೆಟ್ ನೀಡದ ಕಾಂಗ್ರೆಸ್

Prasthutha|

ಗುಜರಾತ್‌: ಕಾಂಗ್ರೆಸ್‌‍ ಈ ಬಾರಿ ತನ್ನ ಸಂಪ್ರದಾಯವನ್ನು ಮುರಿದು ಗುಜರಾತ್‌ನಲ್ಲಿ ಒಬ್ಬ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು‌ ಕೂಡ ಕಣಕ್ಕಿಳಿಸದಿರುವುದು ವಿಶೇಷವಾಗಿದೆ

- Advertisement -

35 ಮುಸ್ಲಿಂ ಅಭ್ಯರ್ಥಿಗಳು ಗುಜರಾತ್‌ನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆದರೆ ಇದರಲ್ಲಿ ಕಾಂಗ್ರೆಸ್ ಒಬ್ಬ ಅಭ್ಯರ್ಥಿಯೂ ಇಲ್ಲ. ಮುಸ್ಲಿಂ ಸಮುದಾಯದ ಬಹುತೇಕ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ ಅಥವಾ ಕಡಿಮೆ ಹೆಸರಾದ ಪಕ್ಷಗಳಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಸಾಂಪ್ರದಾಯಿಕವಾಗಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದ ಭರೂಚ್‌ ಲೋಕಸಭಾ ಕ್ಷೇತ್ರ ಈ ಬಾರಿ ಆಮ್‌ ಆದಿ ಪಕ್ಷದ ಪಾಲಾಗಿದೆ.

ಈ ಕುರಿತು ಗುಜರಾತ್‌ ಕಾಂಗ್ರೆಸ್‌‍ನ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ವಜೀರಖಾನ್‌ ಪಠಾಣ್‌ ಮಾಧ್ಯಮದೊಂದಿದೆ ಮಾತನಾಡಿ, ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಸಾಂಪ್ರದಾಯಿಕವಾಗಿ ಮುಸ್ಲಿಂ ಸಮುದಾಯದಿಂದ ಕನಿಷ್ಠ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿತ್ತು. ಆ ಕ್ಷೇತ್ರ ಭರೂಚ್‌ ಈಗ ಎಎಪಿ ಪಾಲಾಗಿದೆ. ಅದಲ್ಲದೆ, ಸಾಕಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಎರಡು ಸ್ಥಾನಗಳು ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಾಗಿದೆ ಎಂದು ಹೇಳಿದರು.

- Advertisement -

ಗುಜರಾತ್‌ನ ಒಂದು ಸ್ಥಾನದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್‌‍ ಮುಂದಾಗಿತ್ತು, ಆದರೆ ಸಮುದಾಯದ ಸದಸ್ಯರು ಗೆಲುವಿನ ಕಡಿಮೆ ಅವಕಾಶವನ್ನು ನೀಡಿ ನಿರಾಕರಿಸಿದರು ಎಂದು ಅವರು ಹೇಳಿದ್ದಾರೆ.

ಕಳೆದ ಸಲ ಭರೂಚ್‌ ಕ್ಷೇತ್ರವಲ್ಲದೆ, ನವಸಾರಿ ಮತ್ತು ಅಹಮದಾಬಾದ್‌ನಿಂದ ಮುಸ್ಲಿಂ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು.



Join Whatsapp