ಕಾಂಗ್ರೆಸ್ ಸರ್ಕಾರ ಮಚ್ಚು ಹಿಡಿಯುವ ವ್ಯಕ್ತಿಗೆ ಸಚಿವ ಸ್ಥಾನ ನೀಡಿದೆ: ಕುಮಾರಸ್ವಾಮಿ

Prasthutha|

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮಚ್ಚು ಹಿಡಿಯುವ ವ್ಯಕ್ತಿಗೆ ಸಚಿವ ಸ್ಥಾನ ನೀಡಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

- Advertisement -


ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ನಿನ್ನೆಯಿಂದ ರಾಜ್ಯದ ಸಚಿವರ ಚರ್ಚೆ ಆಗುತ್ತಿದೆ. ವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣ ಬಗ್ಗೆ ತಕರಾರು ತೆಗೆಯುತ್ತಿಲ್ಲ. ಮುಗ್ಧರ ಜೀವಗಳ ಜೊತೆ ಭಯಭೀತಿ ಉಂಟುಮಾಡುವ ರೀತಿಯಲ್ಲಿ ಮಂತ್ರಿಗಳು ತೋರಿದ್ದಾರೆ ಎಂದರು.


ದಲಿತರ ಉದ್ಧಾರಕ ಅಂತ ಸಿದ್ದರಾಮಯ್ಯ ಅವರು ಹೇಳುತ್ತಾರೆ. ಬೇರೆ ಪಕ್ಷದವರಿಗೆ ಮಾನ ಮರ್ಯಾದೆ ಇದೆಯಾ ಅಂತಾ ಕೇಳುತ್ತೀರ, ನಿಮಗೇನಾದರೂ ಮಾನಮರ್ಯಾದೆ ಇದೆಯಾ ಸಿದ್ದರಾಮಯ್ಯನವರೇ? ಅಟ್ರಾಸಿಟಿ ಕೇಸ್ ಹಾಕಿದ್ದಾರೆ. ಅಧಿಕಾರಿಗಳಿಗೆ ಎಷ್ಟು ಗಂಟೆಯಲ್ಲಿ ನೀವು ದೂರವಾಣಿ ಕರೆ ಮಾಡಿದ್ದೀರಿ? ಆ ಅಧಿಕಾರಿಯನ್ನು ಮೊದಲು ಅಮಾನತು ಅಂತಾ ಮಾತನಾಡಿದ್ದೀರಿ. ಇದೇನಾ ನೀವು ದಲಿತರ ಪರ ಅಂತಾ ಹೇಳುವುದು ಎಂದರು.

Join Whatsapp