ಜೈಪುರ: ರಾಜಸ್ತಾನದ ಜೈಪುರ ಸರಣಿ ಬಾಂಬ್ ಸ್ಫೋಟದ ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ರಾಜಸ್ತಾನ ಸರಕಾರವು ಎಸ್ ಎಲ್ ಪಿ- ವಿಶೇಷ ರಜಾ ಕಾಲದ ಅರ್ಜಿ ತಯಾರಿಸಿದೆ.
ಅಶೋಕ್ ಗೆಹ್ಲೋಟ್ ಸಂಪುಟದಲ್ಲಿ ಸಚಿವರಾಗಿರುವ ಮಹೇಶ್ ಜೋಶಿಯವರು ಈ ಸಂಬಂಧ ಕಾನೂನು ತಜ್ಞರೊಡನೆ ಸಮಾಲೋಚನೆ ನಡೆದಿದ್ದು, ಹೈಕೋರ್ಟ್ ತೀರ್ಪನ್ನು ಸುಪ್ರೀಂನಲ್ಲಿ ಪ್ರಶ್ನಿಸಲಾಗುವುದು ಎಂದರು.
“ವಿಶೇಷ ಟ್ರಯಲ್ ಕೋರ್ಟಿನ ತೀರ್ಪನ್ನು ಉಚ್ಚ ನ್ಯಾಯಾಲಯವು ಬದಿಗೊತ್ತಿ ಆರೋಪಿಗಳನ್ನು ಬಿಡುಗಡೆ ಮಾಡಿದೆ; ನಮಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಲು ಅವಕಾಶ ಸಿಕ್ಕಿದೆ. ಸರಣಿ ಬಾಂಬ್ ಸ್ಫೋಟಿಸಿದವರು ಶಿಕ್ಷೆ ಅನುಭವಿಸಬೇಕು ಎಂಬುದಕ್ಕಾಗಿ ಎಲ್ಲ ಬಗೆಯ ಕಾನೂನು ಸಾಧ್ಯತೆಗಳ ಪರಿಶೀಲನೆ ನಡೆದಿದೆ. ಹೈಕೋರ್ಟ್ ಬಿಡುಗಡೆ ಮಾಡಿದ್ದನ್ನು ಸುಪ್ರೀಂನಲ್ಲಿ ಪ್ರಶ್ನಿಸಲಾಗುವುದು” ಎಂದು ಸಚಿವರು ಜೈಪುರದಲ್ಲಿ ಮಾತನಾಡುತ್ತ ಹೇಳಿದರು.
ಮಹೇಶ್ ಜೋಶಿಯವರು ಜೈಪುರದ ಹವಾ ಮಹಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, 2008ರ ಸರಣಿ ಸ್ಫೋಟ ಬಹುತೇಕ ಅಲ್ಲಿ ನಡೆದಿತ್ತು.
ಚುನಾವಣೆಯ ಮೇಲೆ ತೀರ್ಪಿನ ಪರಿಣಾಮ
ಈ ವಿಷಯ ರಾಜ್ಯ ಸರಕಾರಕ್ಕೆ ಬಹಳ ಮುಖ್ಯವಾಗಿದೆ. ಏಕೆಂದರೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೇ ಗೃಹ ಖಾತೆಯನ್ನೂ ಹೊಂದಿದ್ದಾರೆ. ಅದಕ್ಕಿಂತ ಹೆಚ್ಚಾಗಿ ರಾಜಸ್ತಾನ ವಿಧಾನ ಸಭೆಯ ಚುನಾವಣೆಯ ಹತ್ತಿರವಾಗುತ್ತಿರುವ ಕಾಲದಲ್ಲಿ ಈ ಬಿಡುಗಡೆಯ ತೀರ್ಪು ಬಂದಿದೆ. ಬಿಡುಗಡೆಯು ಬಿಜೆಪಿಗೆ ಸಹಾಯಕವಾಗಿದ್ದು, ಗೆಹ್ಲೋಟ್ ಅವರು ರಾಜಕೀಯ ಪ್ರತಿಸ್ಪರ್ಧಿ ಮಾಜೀ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮುಖ್ಯಮಂತ್ರಿಯವರ ಗೃಹ ಖಾತೆ ನಿರ್ವಹಣೆಯನ್ನು ಟೀಕಿಸತೊಡಗಿದ್ದಾರೆ.
ಮರಣದಂಡನೆಯನ್ನು ದೂಡಿ ಹಾಕಿದ ರಾಜಸ್ತಾನ ಉಚ್ಚ ನ್ಯಾಯಾಲಯ
ರಾಜಸ್ತಾನ ಸರಣಿ ಸ್ಫೋಟದ ಆರೋಪಿಗಳು ತಪ್ಪಿತಸ್ಥರು ಎಂದು ವಿಶೇಷ ಟ್ರಯಲ್ ಕೋರ್ಟ್ ಅವರಿಗೆ ಮರಣ ದಂಡನೆ ವಿಧಿಸಿತ್ತು. ಬುಧವಾರ ರಾಜಸ್ತಾನ ಹೈಕೋರ್ಟ್ ತೀರ್ಪನ್ನು ರದ್ದುಪಡಿಸಿ ಅವರೆಲ್ಲರನ್ನು ಬಿಡುಗಡೆ ಮಾಡಿದೆ. ಉಚ್ಚ ನ್ಯಾಯಾಲಯದ ತೀರ್ಪು ರಾಜ್ಯ ಸರಕಾರದ ತನಿಖಾ ಸಂಸ್ಥೆಗಳ ಕಜ್ಜದ ಮೇಲೆ ಗೋರಿ ಕಲ್ಲು ಎಳೆದಿದೆ ಎಂದು ವಿಮರ್ಶಿಸಲಾಗುತ್ತಿದೆ.