ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Prasthutha|

ಹುಬ್ಬಳ್ಳಿ: ಮುಖ್ಯಮಂತ್ರಿ ಕುರ್ಚಿ ಕಿತ್ತಾಟ ಇನ್ನಷ್ಟು ಜೋರಾಗಲಿದ್ದು, ಇದರಿಂದ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ ಎಂದು ಸಂಸದ ಜಗದೀಶ ಶೆಟ್ಟರ್ ಭವಿಷ್ಯ ನುಡಿದರು.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುರ್ಚಿ ವಿಷಯವಾಗಿಯೇ ಔತಣಕೂಟ ಆರಂಭವಾಗಿದೆ. ಪರಿಶಿಷ್ಟ ಜಾತಿ, ಪಂಗಡ ಶಾಸಕರು, ಸಚಿವರ ಔತಣಕೂಟಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅಡ್ಡಗಾಲು‌ ಹಾಕಿದ್ದಾರೆ. ತಮ್ಮ ವಿರುದ್ದ ಪಕ್ಷದೊಳಗೆ ಷಡ್ಯಂತ್ರ ನಡೆಯುತ್ತಿದೆ ಎಂದೆನಿಸಿಯೇ ಡಿ.ಕೆ.ಶಿವಕುಮಾರ ಶತ್ರು ಸಂಹಾರ ಯಾಗ ಮಾಡಿಸಿದ್ದಾರೆ. ತೆರೆ‌ಮರೆಯಲ್ಲಿ ಇರುವ ಕಾಂಗ್ರೆಸ್ ಗುದ್ದಾಟ ಶೀಘ್ರದಲ್ಲೇ ಬೀದಿರಂಪವಾಗಲಿದೆ ಎಂದರು.

ನಕ್ಸಲರ ಶರಣಾಗತಿ ಬಗ್ಗೆ ಸರ್ಕಾರ ಇಷ್ಟೊಂದು ವೈಭವೀಕರಿಸುವ ಅವಶ್ಯಕತೆ ಇರಲಿಲ್ಲ. ನಕ್ಸಲರು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಮುಂದೆ ಶರಣಾಗಬೇಕಾಗಿತ್ತು. ಕೊನೆ ಕ್ಷಣದಲ್ಲಿ‌ ನಿಲುವು ಬದಲಿಸಿ ಸಿಎಂ ಎದುರು‌ ಶರಣಾಗಿದ್ದು ಸರಿಯಲ್ಲ ಎಂದರು.



Join Whatsapp