ಕಾಂಗ್ರೆಸ್​ ಸರ್ಕಾರ ವಿದ್ಯುತ್​ ಬಿಲ್​ ಹೆಚ್ಚಳ ಮಾಡಿಲ್ಲ: ಸಚಿವ ಡಾ.ಜಿ. ಪರಮೇಶ್ವರ್

Prasthutha|

- Advertisement -

ತುಮಕೂರು: ನಮ್ಮ ಸರ್ಕಾರ ಕರೆಂಟ್​ ಬಿಲ್​ ಜಾಸ್ತಿ ಮಾಡಿಲ್ಲ. ಹಿಂದಿನ ಸರ್ಕಾರದಲ್ಲಿಯೇ ವಿದ್ಯುತ್​ ದರ ಏರಿಕೆ ಮಾಡಲಾಗಿತ್ತು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್​ ಹೇಳಿದ್ದಾರೆ.

ತುಮಕೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್​ ವಿದ್ಯುತ್​ ಬಿಲ್ ಏರಿಕೆ ಮಾಡಿದೆ ಎಂದು ಕೆಲವರು ಸುಮ್ಮನೆ ಕತೆ ಕಟ್ಟುತ್ತಿದ್ದಾರೆ ಎಂದು ಹೇಳಿದ್ದಾರೆ.

- Advertisement -

ಕರೆಂಟ್​ ಬಿಲ್​ ಜಾಸ್ತಿ ಬರೋಕೆ ನಮ್ಮ ಸರ್ಕಾರ ಕಾರಣವಲ್ಲ. ನೀವು ಯುನಿಟ್​ ಜಾಸ್ತಿ ಬಳಕೆ ಮಾಡಿದ್ದರೆ ನೀವೇ ಬಿಲ್​ ಕಟ್ಟಬೇಕು . ಹಿಂದಿನ ಸರ್ಕಾರ ವಿದ್ಯುತ್​ ದರ ಏರಿಕೆ ಮಾಡಿದ್ದು ಅದರ ಬಿಲ್​ ಈಗ ಬಂದಿದೆ ಎಂದು ಡಾ.ಜಿ ಪರಮೇಶ್ವರ್​ ಹೇಳಿದರು .

ಗ್ಯಾರಂಟಿ ಕಾರ್ಡ್​ ನಲ್ಲಿದ್ದ ಎಲ್ಲಾ ಯೋಜನೆಗಳನ್ನು ನಾವು ಜಾರಿ ಮಾಡುತ್ತೇವೆ, ಎಲ್ಲಾ ಯೋಜನೆಗಳು ಮುಂದುವರಿಯುತ್ತಿದೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

Join Whatsapp