ಶೆಟ್ಟರ್ ಸೋತರೂ ಕಾಂಗ್ರೆಸ್ ಸೂಕ್ತ ಸ್ಥಾನಮಾನ ನೀಡಿತ್ತು: ಲಕ್ಷ್ಮಿ ಹೆಬ್ಬಾಳ್ಕರ್

Prasthutha|

ಉಡುಪಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಬಿಟ್ಟಿರುವುದು ನನಗೆ ದಿಗ್ಭ್ರಮೆ ತಂದಿದೆ. ಶೆಟ್ಟರ್ ಕಾಂಗ್ರೆಸ್ ಗೆ ಬಂದದ್ದು ಯಾಕೆ? ಹೋದದ್ದು ಯಾಕೆ? ರಾಜಕೀಯದಲ್ಲಿ ಈ ರೀತಿ ಆಗಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

- Advertisement -


ಈ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಶೆಟ್ಟರ್ ಬಿಜೆಪಿಯಲ್ಲಿ ಅವಮಾನ ಆಯ್ತು ಅಂತ ಶೆಟ್ಟರ್ ಕಾಂಗ್ರೆಸ್ ಗೆ ಬಂದ್ರು. ಅವರಾಗಿಯೇ ಬಂದರೂ ನಾವು ಅವರನ್ನು ಸ್ವಾಗತ ಮಾಡಿದೆವು. ಟಿಕೆಟ್ ಕೊಟ್ಟೆವು ಚುನಾವಣೆಯಲ್ಲಿ ಸೋತರು. ನಮ್ಮ ಕಾರ್ಯಕರ್ತರು ತ್ಯಾಗ ಮಾಡಿ ರಾತ್ರಿ ಹಗಲು ದುಡಿದಿದ್ದರು. ಸೋತ ಮೇಲೂ ಅನುಕೂಲ ಸಿಗಬೇಕು, ತೊಂದರೆ ಆಗಬಾರದು ಎಂದು ಎಂಎಲ್ಸಿ ಮಾಡಿದೆವು. ಕಾಂಗ್ರೆಸ್ ನಲ್ಲಿ ಯಾವುದೇ ರೀತಿಯ ತೊಂದರೆಗಳು ಇರಲಿಲ್ಲ ಯಾಕೆ ವಾಪಸ್ ಹೋಗಿದ್ದಾರೆ ಎಂದು ಗೊತ್ತಿಲ್ಲ ಎಂದರು.

ಶೆಟ್ಟರ್ ಕಾಂಗ್ರೆಸ್ ಬಿಟ್ಟಿರುವುದು ನನಗೆ ದಿಗ್ಭ್ರಮೆ ತಂದಿದೆ. ಶೆಟ್ಟರ್ ಕಾಂಗ್ರೆಸ್ ಗೆ ಬಂದದ್ದು ಯಾಕೆ? ಹೋದದ್ದು ಯಾಕೆ? ಸಚಿವ ಸ್ಥಾನ ಕೇಳಿದ್ದರೋ ನನಗೆ ಗೊತ್ತಿಲ್ಲ. ಏನು ಬೇಡಿಕೆ ಇಟ್ಟಿದ್ದರು ಎಂದು ಅವರನ್ನೇ ಕೇಳಿದರೆ ಸೂಕ್ತ. ರಾಜಕೀಯದಲ್ಲಿ ಈ ರೀತಿ ಆಗಬಾರದು. ನೀತಿ, ನಿಯಮ, ತತ್ವ ಸಿದ್ಧಾಂತದ ಜೊತೆಗೆ ತೆಗೆದುಕೊಂಡು ಹೋಗಬೇಕು. ಬಂದ ಪುಟ್ಟ ಹೋದ ಪುಟ್ಟ ಎಂದರೆ ಅದಕ್ಕೆ ಅರ್ಥ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು.



Join Whatsapp