ಕಾಂಗ್ರೆಸ್‌ ವಿದ್ಯುನ್ಮಾನ ಮತಯಂತ್ರದ ಬಳಕೆ ಬೇಡ ಎಂದಿಲ್ಲ: ಚಿದಂಬರಂ

Prasthutha|

ಚೆನ್ನೈ: ವಿದ್ಯುನ್ಮಾನ ಮತಯಂತ್ರದ ಬಳಕೆಯನ್ನು ಕಾಂಗ್ರೆಸ್‌ ಪಕ್ಷ ಬೇಡ ಎಂದಿಲ್ಲ. ಆದರೆ ವಿವಿಪ್ಯಾಟ್‌ಗಳ ಸುಧಾರಣೆಗೆ ಒತ್ತಾಯಿಸಿತ್ತು ಎಂದು ಮಾಜಿ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮತಯಂತ್ರಗಳ ಮೇಲಿನ ವಿಪಕ್ಷಗಳ ಆರೋಪಕ್ಕೆ ಉಸ್ತುವಾರಿ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಚಿದಂಬರಂ, ‘ನಾನು ಎಂದಿಗೂ ಮತಯಂತ್ರವನ್ನು ದೂರಿಲ್ಲ.ಪಕ್ಷದ ಪ್ರಣಾಳಿಕೆಯಲ್ಲಿ ನಾವು ಇದನ್ನು ಉಲ್ಲೇಖಿಸಿಯೂ ಇಲ್ಲ ಎಂದಿದ್ದಾರೆ.

ಈಗಲೂ ಹತ್ತರಲ್ಲಿ ನಾಲ್ಕು ಅಥವಾ ಮೂರು ಜನರು ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ನಾನು ಮತಯಂತ್ರವನ್ನು ಎಂದಿಗೂ ದೂರಿಲ್ಲ. ಪಕ್ಷದ ಒಬ್ಬರು ಅಥವಾ ನಾಯಕರು ಮತಯಂತ್ರವನ್ನು ವಿರೋಧಿಸಿದರೆ ಅದು ಪಕ್ಷದ ನಿಲುವಲ್ಲ ಎಂದರು.

- Advertisement -

ನಾವು ಮತ ಹಾಕಿದ ಬಳಿಕ ವಿವಿಪ್ಯಾಟ್‌ ಯಂತ್ರದಲ್ಲಿ ನಾವು ಯಾವ ಪಕ್ಷಕ್ಕೆ ಮತ ಹಾಕಿದ್ದೇವೆ ಎಂಬುದನ್ನು ಕನಿಷ್ಠ 4ರಿಂದ 5 ಸೆಕೆಂಡುಗಳ ಕಾಲ ತೋರಿಸಬೇಕು. ನಂತರ ವಿವಿಪ್ಯಾಟ್‌ ಸ್ಲಿಪ್‌ ಬಾಕ್ಸ್‌ ಒಳಗೆ ಬೀಳಬೇಕು. ಮತಯಂತ್ರದಲ್ಲಿ ಈ ಸುಧಾರಣೆಯಾಗಬೇಕು ಎಂದು ನಾವು ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ ಎಂದರು. 



Join Whatsapp