ನನಗೆ ಮಸಾಲೆ ದೋಸೆ ಕಳಿಸದೆ ಕಾಂಗ್ರೆಸ್ ಮೋಸ ಮಾಡಿದೆ: ತೇಜಸ್ವಿ ಸೂರ್ಯ

Prasthutha|

ಬೆಂಗಳೂರು: 24 ಗಂಟೆಯಾದರೂ ನನ್ನ ಮನೆಗೆ ದೋಸೆ ಬಂದಿಲ್ಲ, ದೋಸೆ ಕಳಿಸುವ ಈ ವಿಚಾರದಲ್ಲೂ ಕಾಂಗ್ರೆಸ್ ಮೋಸ ಮಾಡಿದೆ ಎಂದು ಹೇಳುವ ಮೂಲಕ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಂಸದ ತೇಜಸ್ವಿ ಕೈ ನಾಯಕರ ಕಾಲೆಳೆದಿದ್ದಾರೆ.

- Advertisement -


ಕಾಂಗ್ರೆಸ್ ನ ಮಸಾಲೆ ದೋಸೆ ಪಾರ್ಸೆಲ್ ವಿಚಾರವಾಗಿ ಟ್ವೀಟ್ ಮಾಡಿದ ತೇಜಸ್ವಿ ಸೂರ್ಯ, “ಕಾಂಗ್ರೆಸ್ ನಿನ್ನೆ ಪತ್ರಿಕಾಗೋಷ್ಠಿಯನ್ನು ನಡೆಸಿತು ಮತ್ತು ಅವರು ನನ್ನ ಮನೆಗೆ ಮಸಾಲೆ ದೋಸೆ ಪಾರ್ಸೆಲ್ ಕಳುಹಿಸಿದ್ದೇವೆ ಎಂದು ಘೋಷಿಸಿದೆ. ಅದಾಗಿ 24 ಗಂಟೆಗಳಿಗಿಂತ ಹೆಚ್ಚು ಸಮಯವಾಗಿದೆ. ನಾನು ಅದನ್ನು ಇನ್ನೂ ಸ್ವೀಕರಿಸಿಲ್ಲ. ಇಲ್ಲೂ ಮೋಸ ಮಾಡಿದ್ದಾರೆ. ಅವರಿಗೆ ಸರಿಯಾಗಿ ದೋಸೆ ಕೊಡಲು ಸಾಧ್ಯವಿಲ್ಲ. ಹೀಗಿದ್ದರೂ ಅವರು ಉತ್ತಮ ಆಡಳಿತ ನೀಡುವ ಕನಸು ಕಾಣುತ್ತಾರೆ” ಎಂದು ಹೇಳಿದ್ದಾರೆ.


ತೇಜಸ್ವಿ ಸೂರ್ಯ ಅವರಿಗೆ ನಗರದ ಜನಪ್ರಿಯ ರೆಸ್ಟೋರೆಂಟ್ ಗಳಿಂದ 10 ವಿವಿಧ ದೋಸೆಗಳನ್ನು ಕಳುಹಿಸಿದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಹೇಳಿದ್ದರು. ಅಲ್ಲದೆ, ಸಂಸದರು ರೆಸ್ಟೋರೆಂಟ್ ಗಳ ಜನಪ್ರಿಯತೆಯ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ, ಜನರ ಬಗ್ಗೆ ಚಿಂತಿಸುತ್ತಿಲ್ಲ ಎಂದು ಕಾಂಗ್ರೆಸ್ ಟೀಕಿಸಿತ್ತು.

Join Whatsapp