ಪಡುಬಿದ್ರಿ | ಕಾಂಗ್ರೆಸ್ ಬೆಂಬಲಿತರಾಗಿ ಮತ ಪಡೆದು ಬಿಜೆಪಿಯಿಂದ ಅಧ್ಯಕ್ಷೆಯಾದಾಕೆಯ ವಿರುದ್ಧ ಜನ ಗರಂ

Prasthutha|

ಪಡುಬಿದ್ರಿ : ಚುನಾವಣೆಯ ವೇಳೆ ಮನೆ ಬಾಗಿಲಿಗೆ ಪದೇಪದೇ ಬಂದು ಮತ ಯಾಚಿಸಿ, ವಿಜಯಿಯಾಗಿ ಮತ್ತೊಂದು ಪಕ್ಷದ ಬೆಂಬಲಕ್ಕೆ ನಿಂತ ಗ್ರಾಮ ಪಂಚಾಯತ್ ಸದಸ್ಯೆಯೊಬ್ಬರು ತಮ್ಮ ವಿರುದ್ಧವೇ ದೂರು ದಾಖಲಿಸಿದ ಬಗ್ಗೆ ತೆಂಕ ಗ್ರಾಮದ ಗ್ರಾಮಸ್ಥರು ದೂರಿದ್ದಾರೆ.

- Advertisement -

ಕಾಂಗ್ರೆಸ್ ಬೆಂಬಲಿತರಾಗಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದ ಕಸ್ತೂರಿ ಪ್ರವೀಣ್ ಸ್ಥಳೀಯ ಮುಸ್ಲಿಂ ಮಹಿಳೆಯರೊಂದಿಗೆ ಚೆನ್ನಾಗಿದ್ದರು. ಈ ಪ್ರದೇಶದಲ್ಲಿ ಅವರನ್ನು ಗೆಲ್ಲಿಸುವಲ್ಲಿ ಈ ಭಾಗದ ಜನರ ಬೆಂಬಲ ಅವರಿಗೆ ದೊಡ್ಡ ಮಟ್ಟದಲ್ಲಿ ಸಿಕ್ಕಿತ್ತು. ಆದರೆ, ಗೆದ್ದ ಬಳಿಕ ಪಂಚಾಯತ್ ಅಧ್ಯಕ್ಷೆಯಾಗುವ ಆಸೆಯಿಂದ ಅವರು ಬಿಜೆಪಿ ಬೆಂಬಲ ಪಡೆದಿದ್ದಾರೆ.

ಇದರಿಂದ ಆಕ್ರೋಶಿತರಾದ ಸ್ಥಳೀಯ ಮಹಿಳೆಯರು ಆಕೆಯ ಮನೆಗೆ ತೆರಳಿ ತಾವು ಹೀಗೇಕೆ ಮಾಡಿದಿರಿ ಎಂದು ಪ್ರಶ್ನಿಸಿದ್ದರು. ಈ ಕುರಿತ ವಾಗ್ವಾದಕ್ಕೆ ಸಂಬಂಧಿಸಿ, ಪಂಚಾಯತ್ ಸದಸ್ಯೆ ಠಾಣೆಗೆ ದೂರು ನೀಡಿದ್ದಾರೆ. ಇವರಿಗೆ ಮತ ಹಾಕಿದ ತಪ್ಪಿಗೆ ತಮ್ಮನ್ನು ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಆಪಾದಿಸಿದ್ದಾರೆ.

- Advertisement -

ಇವರು ನಿಷ್ಠಾವಂತರೇ ಆಗಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ, ಕಾಂಗ್ರೆಸ್ ಪಕ್ಷ ಇವರ ಸದಸ್ಯತ್ವವನ್ನು ಕಿತ್ತು ಹಾಕಲಿ ಎಂಬುದಾಗಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೂ ದೂರು ರಾಜಿಯಲ್ಲಿ ಅಂತ್ಯ ಕಂಡಿದೆ.



Join Whatsapp