RSS ನಂತೆಯೇ ಸಂಘ ಸ್ಥಾಪನೆಗೆ ಮುಂದಾದ ಕಾಂಗ್ರೆಸ್: JBMಗೆ ಚಾಲನೆ

Prasthutha|

ನವದೆಹಲಿ: ಆರ್ ಎಸ್ ಎಸ್ ಬಾಲ ಗೋಕುಲಂನಂತೆಯೇ, ಕಾಂಗ್ರೆಸ್ ಜವಾಹರ್ ಬಾಲ್ ಮಂಚ್ ಪ್ರಾರಂಭಿಸುವ ಮೂಲಕ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಮುಂದಾಗಿದೆ.

- Advertisement -


ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಮತ್ತು ಪಕ್ಷದ ಜಾತ್ಯತೀತ ಸಿದ್ಧಾಂತವನ್ನು ಪ್ರಚಾರ ಮಾಡಲು, ಹೊಸ ಪೀಳಿಗೆಯನ್ನು ಆಕರ್ಷಿಸಲು ಇದು ನೆರವಾಗಲಿದೆ ಎಂದು ಪಕ್ಷ ಹೇಳಿದೆ.
ಆದ್ದರಿಂದ 7 ರಿಂದ 17 ವರ್ಷದೊಳಗಿನ ಮಕ್ಕಳಿಗಾಗಿ ಜವಾಹರ್ ಬಾಲ್ ಮಂಚ್ ಎಂಬ ಸಂಘಟನೆಯನ್ನು ಆರಂಭಿಸಿದೆ. ಕೇರಳ ಪ್ರಾದೇಶಿಕ ಕಾಂಗ್ರೆಸ್ ಕಮಿಟಿ ಕಳೆದ 15 ವರ್ಷಗಳಿಂದ ಈ ಸಂಘಟನೆಯನ್ನು ನಡೆಸುತ್ತಿದ್ದು ಅದೇ ಮಾದರಿಯಲ್ಲಿ ಈಗ ಪಕ್ಷ ಸಂಘ ಸ್ಥಾಪನೆ ಮಾಡಿದೆ. ಈ ಸಂಘಟನೆಗೆ ಕೇರಳ ಕಾಂಗ್ರೆಸ್ ನಾಯಕ ಜಿ.ವಿ. ಹರಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಕೇರಳ ಕಾಂಗ್ರೆಸ್ ನಿಂದ ಇಲ್ಲಿಯವರೆಗೆ ಎರಡೂವರೆ ಲಕ್ಷ ಮಕ್ಕಳಿಗೆ ತರಬೇತಿ ನೀಡಲಾಗಿದೆ. ರಾಜ್ಯಮಟ್ಟದ ಈ ಕಾರ್ಯಕ್ರಮ ಯಶಸ್ಸು ಕಂಡಿದ್ದರಿಂದ, ರಾಷ್ಟ್ರಮಟ್ಟಕ್ಕೂ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುತ್ತಿದೆ.
ಶಿಬಿರಗಳು, ಕಾರ್ಯಾಗಾರಗಳು, ಸೆಮಿನಾರ್ಗಳು ಮತ್ತು ದೈಹಿಕ ತರಬೇತಿಯ ಮೂಲಕ ಮಕ್ಕಳಿಗೆ ಕಾಂಗ್ರೆಸ್ನ ಸಿದ್ಧಾಂತ ಮತ್ತು ಪಕ್ಷದ ಕೊಡುಗೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಜಿ.ವಿ. ಹರಿ. ಮಾಹಿತಿ ನೀಡಿದ್ದಾರೆ.

Join Whatsapp