ಬೆಂಗಳೂರು: ರಾಜ್ಯಾ ದ್ಯಂತ ಸೋಮವಾರದಿಂದ ಶಾಲೆಗಳು ಆರಂಭವಾಗಿದ್ದು, ಸರಕಾರಿ ಶಾಲೆಗಳಲ್ಲಿ ಸಮವಸ್ತ್ರ ವಿತರಿಸಲು ಇನ್ನೂ ಮೂರು ತಿಂಗಳು ಬೇಕಾಗಿದೆ.
ಸಮವಸ್ತ್ರ ವಿತರಣೆಟೆಂಡರ್ ಪ್ರಕ್ರಿಯೆಯಲ್ಲಿ ಕೆಲವು ಗೊಂದಲಗಳಿದ್ದು, ಶೀಘ್ರ ವೇ ಅವು ಗಳನ್ನು ಬಗೆಹರಿಸಿ ಆದಷ್ಟು ಬೇಗ ಮಕ್ಕಳಿಗೆ ಸಮವಸ್ತ್ರ ವಿತರಿ ಸಲು ಕ್ರಮ ವಹಿಸ ಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಫೆಬ್ರವರಿಯಲ್ಲಿ ಶಿಕ್ಷಣ ಇಲಾಖೆ ನಡೆಸಿದ ಟೆಂಡರ್ ಪ್ರಕ್ರಿಯೆ ರದ್ದಾ ಗಿದ್ದು, ಹೊಸ ಟೆಂಡರ್ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ. ಟೆಂಡರ್ ಅಂತಿಮವಾದ ಬಳಿಕ ಸಮ ವಸ್ತ್ರ ವಿತರಣೆ ಆರಂಭವಾಗಲಿದೆ.
ಪ್ರತೀ ವರ್ಷ ಶಾಲೆ ಆರಂಭವಾಗುವ ವೇಳೆಗೆ ಪಠ್ಯಪುಸ್ತಕದ ಜತೆಗೆ ಸಮವಸ್ತ್ರ ವನ್ನು ವಿತರಿಸಲಾಗುತ್ತಿತ್ತು. ಆದರೆ ಕೊರೊನಾದಿಂದಾಗಿ ಶಿಕ್ಷಣ ಇಲಾಖೆಗೆ ಅನುದಾನ ಬಿಡುಗಡೆ ವಿತರಣೆ ಮೇಲೂ ಪರಿಣಾಮ ಬೀರಿದ್ದರಿಂದ ಟೆಂಡರ್ ಅಂತಿಮವಾಗಿಲ್ಲ.
ಫೆಬ್ರವರಿಯಲ್ಲಿ ಸಮವಸ್ತ್ರ ವಿತರಣೆ ಬಗ್ಗೆ ಕರೆದಿದ್ದ ಟೆಂಡರ್ ಪ್ರಕ್ರಿಯೆ ಅನುದಾನ ನಿಗದಿಯಲ್ಲಿ ಬಟ್ಟೆ ವಿತರಣೆ ಕಂಪೆನಿಗಳು ಹಾಗೂ ಸರಕಾರದ ನಡುವೆ ಒಪ್ಪಂದವಾಗದ ಕಾರಣ ಟೆಂಡರ್ ಪ್ರಕ್ರಿಯೆಗಳು ರದ್ದಾಗಿದೆ.
ಕೊರೊನಾ ಪೂರ್ವದ ಅವಧಿಯಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಎರಡು ಜತೆ ಸಮವಸ್ತ್ರ ವಿತರಿಸಲಾಗುತ್ತಿತ್ತು. ಈ ಪೈಕಿ ಮೊದಲ ಸೆಟ್ ರಾಜ್ಯ ಮತ್ತು ಎರಡನೇ ಸೆಟ್ ಕೇಂದ್ರ ಸರಕಾರದ್ದಾಗಿತ್ತು. ಮೊದಲ ಸೆಟ್ ಅನ್ನು ಸರಕಾರವೇ ಹೊಲಿಸಿ ವಿತರಿಸಿದರೆ, ಎರಡನೇ ಸೆಟ್‌ನ ಬಟ್ಟೆ ವಿತರಿಸಲಾಗುತ್ತಿತ್ತು.ಸಂಬಂಧಪಟ್ಟ ಶಾಲಾಭಿವೃದ್ಧಿ ಮತ್ತು ನಿರ್ವಹಣ ಸಮಿತಿಗಳು ಹೊಲಿಸಿ ಮಕ್ಕಳಿಗೆ ವಿತರಣೆ ಮಾಡುತ್ತಿದ್ದವು.
ಇದೀಗ ಎರಡು ಜೊತೆ ಸಮವಸ್ತ್ರಗಳನ್ನೂ 2021ರಿಂದ ರಾಜ್ಯ ಸರಕಾರವೇ ನೀಡಲು ಮುಂದಾಗಿದ್ದು, 2ನೇ ಜತೆ ಸಮವಸ್ತ್ರದ ಅನುದಾನವನ್ನು ರಾಜ್ಯ ಸರಕಾರಕ್ಕೆ ವಿತರಿಸಲು ಕೇಂದ್ರ ಒಪ್ಪಿಗೆ ನೀಡಿತ್ತು. ಅದರ ಬಳಿಕ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಎರಡೂ ಜತೆ ಸಮವಸ್ತ್ರ ವಿತರಣೆಯಾಗಿಲ್ಲ. ಕಳೆದ ವರ್ಷ ಕೇವಲ ಒಂದು ಜತೆ ಮಾತ್ರ ವಿತರಿಸಲಾಗಿತ್ತು.