ಕಂಡಕ್ಟರ್ ಆತ್ಮಹತ್ಯೆ: ಡಿಪೋ ಮ್ಯಾನೇಜರ್ ಸಸ್ಪೆಂಡ್

Prasthutha|

ಬೆಂಗಳೂರು: ಡ್ರೈವರ್ ಕಂ ಕಂಡಕ್ಟರ್ ಹೊಳೆಬಸಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಿಎಂಟಿಸಿ ಡಿಪೋ ಮ್ಯಾನೇಜರ್ ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

- Advertisement -

ರಾಜರಾಜೇಶ್ವರಿನಗರದ ಬಿಎಂಟಿಸಿ ಡಿಪೋ 21ರ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಸಸ್ಪೆಂಡ್ ಆದವರು.
ಮಲ್ಲಿಕಾರ್ಜುನಯ್ಯ ವಿರುದ್ಧ ಡೆತ್ ನೋಟ್ ಬರೆದಿಟ್ಟು ಡ್ರೈವರ್ ಕಂ ಕಂಡಕ್ಟರ್ ಹೊಳೆಬಸಪ್ಪ ಆಗಸ್ಟ್ 29 ರಂದು ಡಿಪೋ -21 ರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೊಳೆಬಸಪ್ಪ ಜೇಬಿನಲ್ಲಿ ಡಿಪೋ ಮ್ಯಾನೇಜರ್ ಕಿರುಕುಳದ ಬಗ್ಗೆ ಡೆತ್ ನೋಟ್ ಸಿಕ್ಕಿತ್ತು ಎನ್ನಲಾಗಿದೆ.

ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ಮೃತನ ಪತ್ನಿ ದೂರು ನೀಡಿದ್ದರು.

- Advertisement -

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಟಿಸಿ ಎಂಡಿ ಎಂ.ಜಿ ಸತ್ಯವತಿ ತನಿಖೆಗೆ ಆದೇಶ ಮಾಡಿದ್ದರು. ಬಿಎಂಟಿಸಿಯ ಜಾಗೃತ ಮತ್ತು ಭದ್ರತಾದಳದ ಮುಖ್ಯ ಅಧಿಕಾರಿ ರಾಧಿಕಾ ತನಿಖೆ ಮಾಡಿ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಮಲ್ಲಿಕಾರ್ಜುನಯ್ಯ ಹಣಕ್ಕೆ ಒತ್ತಾಯಿಸಿದ್ದು ಗಮನಕ್ಕೆ ಬಂದಿದ್ದು, ಕಂಡಕ್ಟರ್ ಮತ್ತು ಡ್ರೈವರ್ ಗಳಿಗೆ ಕಿರುಕುಳ ನೀಡಲಿರುವ ಬಗ್ಗೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಡಿಪೋ ಮ್ಯಾನೇಜರ್ ರನ್ನು ಸಸ್ಪೆಂಡ್ ಮಾಡಲಾಗಿದೆ.



Join Whatsapp